ಬೆಳಗಾವಿ : ಪೋಸ್ಕೋ ಕೇಸ್ ನಲ್ಲಿ ಆರೋಪಿಗೆ ಇದೇ ಮೊದಲು ಸಲ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಗಲ್ಲು ಶಿಕ್ಷೆ ನೀಡಿ ಬೆಳಗಾವಿ ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯಲ್ಲಿ ಉದ್ದಪ್ಪ ಗಾಣಿಗೇರಿ (32) ಎಂಬಾತ 7 ವರ್ಷಗಳ ಹಿಂದೆ ಮೂರು ವರ್ಷದ ಬಾಲಕಿಯನ್ನ ಅಪಹರಿಸಿ, ಅತ್ಯಾಚಾರವೆಸಗಿದ್ದ. ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿದ್ದರು. ಸದ್ಯ ಕಲಂ 366ಎ, 376 302, 201 ಐ.ಪಿ.ಸಿ ಮತ್ತು 4, 6, 8, 12 ಪೋಕ್ಸೋ ಕಾಯ್ದೆ 2012 ಅಡಿ ಗಲ್ಲು ಶಿಕ್ಷೆ ಪ್ರಕಟವಾಗಿದೆ.