ಈಗಿನ ಕಾಲದಲ್ಲಿ ದುಡ್ಡಿದ್ರೇನೆ ದುನಿಯಾ.. ಐಶಾರಾಮಿ ಜೀವನ ನಡೆಸಬೇಕು.. ನಾವು ಎಲ್ಲರ ಹಾಗೆ ಖುಷಿಯಾಗಿರಬೇಕು ಅಂತಾ ಇಂದಿನ ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ಹೈ-ಫೈ ಲೈಫ್, ಪಬ್, ಬಾರ್, ಶಾಪಿಂಗ್ಪ್ಯಾ, ಮಿಲಿ ಅಂತಾ ಇಎಂಐಗಳನ್ನ ಮಾಡ್ಕೊಂಡು ತಿಂಗಳ ಕೊನೆಗೆ ಜೇಬು ಖಾಲಿ ಮಾಡ್ಕೊಂಡಿರೋ ಹುಡುಗರನ್ನ ನಾವು ನೋಡಿರ್ತೀವಿ. ಆದ್ರೆ, ಇಲ್ಲೊಬ್ಬ ಸರಳ ವ್ಯಕ್ತಿಯ ಜೀವನ ಜೈಲಿಯನ್ನ ನೋಡಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರ.
ಹೌದು, ಆತನಿಗೆ ವರ್ಷಕ್ಕೆ 45 ಲಕ್ಷ ರೂ ಸಂಬಳ.. ಒಳ್ಳೆ ಕಂಪನಿ.. ಉನ್ನತ ಹುದೆ ಎಲ್ಲವೂ ಇದೆ. ಆದ್ರೆ, ಈತ ಮಾತ್ರ ತುಂಬಾ ಸಿಂಪಲ್ ವ್ಯಕ್ತಿ. ಇದಕ್ಕೆ ಈ ಹುಡುಗಿ ಶೇರ್ ಮಾಡಿರುವ ಒಂದು ಪೋಸ್ಟ್ ಉದಾಹರಣೆಯಂತಿದೆ.
ಸಾಕ್ಷಿ ಎಂಬ ಯುವತಿ ತನ್ನ ಸ್ನೇಹಿತ ಬಳಸುವ ದೈನಂದಿನ ಬಾತ್‌ರೂಂ ಕಿಟ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ವರ್ಷಕ್ಕೆ 45 ಲಕ್ಷ ರೂ. ಪ್ಯಾಕೇಜ್ ಹೊಂದಿರುವ ನನ್ನ ಸ್ನೇಹಿತನ ಈ ಚೀಲವನ್ನು ನೋಡಿ. ಪುರುಷರು ಅತ್ಯಂತ ಸರಳ ಸ್ವಭಾವದವರು ಎಂದು ಹೇಳೋದಕ್ಕೆ ಈ ಕಿಟ್ ಸಾಕ್ಷಿ ಎಂದು ತನ್ನ ಗೆಳೆಯನ ಲೈಫ್ ಸ್ಟೈಲ್ ಬಗ್ಗೆ ಒಂದೆರೆಡು ಲೈನ್‌ಗಳನ್ನೂ ಬರೆದುಕೊಂಡಿದ್ದಾರೆ.
ಈ ಫೋಟೋವನ್ನು ನೋಡಿದ್ರೆ, ಆ ವ್ಯಕ್ತಿಯ ಪೌಚ್‌ನಲ್ಲಿ ಒಂದು ಲಕ್ಸ್ ಸೋಪ್, ಸಣ್ಣ ಕ್ಲೋಸಪ್ ಟೂತ್‌ಪೇಸ್ಟ್, ಪ್ಲಾಸ್ಟಿಕ್ ಬಾಚಣಿಗೆ ಹಾಗೂ ಕೂದಲಿಗೆ ಹಚ್ಚುವ ಎಣ್ಣೆಯ ಸಣ್ಣ ಬಾಟಲಿ ಹೀಗೆ ಕಡಿಮೆ ಬೆಲೆಯ ಸಿಂಪಲ್ ವಸ್ತುಗಳಿವೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಜೊತೆಗೆ ಈ ಪೋಸ್ಟ್ 3 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಇನ್ನೂ ಈ ಪೋಸ್ಟ್ ನೋಡಿದ ಓರ್ವ ʼಆತ ಆ ಪೌಚ್ ಅನ್ನು ಇಟ್ಟುಕೊಂಡಿದ್ದಾನೆ ಎನ್ನೋದೇ ದೊಡ್ಡ ವಿಷಯ’ ಎಂದಿದ್ರೆ, ಮತ್ತೊಬ್ಬ ಬಳಕೆದಾರರು, ಲಕ್ಸ್ ಸೋಪ್ ಪ್ರೀಮಿಯಂ ಆಗಿದೆ. ಲೈಫ್‌ಬಾಯ್ ಸೋಪ್ ರೀತಿಯೇ ಅದು ಕೂಡ ಕೆಲಸ ಮಾಡುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು‘ಅಷ್ಟೊಂದು ದೊಡ್ಡ ಮೊತ್ತದ ಸಂಬಳ ಇದ್ರೂ ಇವನ ಸಿಂಪಲ್ ಲೈಫ್ ನಿಜಕ್ಕೂ ಶಾಕ್ ಎನಿಸುವಂತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.