ನಾವು ಸುಳ್ಳಿನ ಘೋಷಣೆ ಮಾಡಿಲ್ಲ, ಬಡತನ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ಈವರೆಗೂ 4 ಕೋಟಿಗೂ ಹೆಚ್ಚು ಮನೆಗಳನ್ನ ನಿರ್ಮಾಣ ಮಾಡಿದ್ದೇವೆ.. ಈ ಹಿಂದೆ ಗರೀಬಿ ಹಠಾವೋ ಎಂದು ಘೋಷಣೆ ಮಾಡಿದವರು, ಬಡತನವನ್ನ ನಿರ್ಮೂಲನೆ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಎನ್‌ಡಿಎ ಅಧಿಕಾರಕ್ಕೆ ಬಂದ್ಮೇಲೆ 12 ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದೆ.. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ದೆಹಲಿಯಿಂದ 1 ರೂಪಾಯಿ ಹೋದ್ರೆ ಹಳ್ಳಿಗೆ ತಲುಪುವ ಅಷ್ಟರಲ್ಲಿ ಅದು 15 ಪೈಸೆ ಆಗುತ್ತಿತ್ತು.. ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಬದಲಾವಣೆ ಹೇಗೆ ಆಗಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ತೆರೆದಿಟ್ಟಿದ್ದಾರೆ.. ನಾವು ದೇಶದಲ್ಲಿ ಮನೆ-ಮನೆಗೂ ಕುಡಿಯುವ ನೀರು ಕಲ್ಪಿಸಿದ್ದೇವೆ.. ಜನರ ಹಣ ಜನರಿಗೇ ಅನ್ನೋದು ನಮ್ಮ ಉದ್ದೇಶ, ಡಿಬಿಟಿ ಯೋಜನೆ ಮೂಲಕ ಜನರ ಖಾತೆಗೆ ಇದೀಗ ನೇರವಾಗಿ ಹಣ ಸೇರುತ್ತಿದೆ.. ಹತಾಶೆ, ನಿರಾಸೆಯಿಂದ ವಿಪಕ್ಷದವರು ಏನೇನೋ ಮಾತನಾಡ್ತಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ..
#WATCH | In Lok Sabha, PM Modi says, "A PM was there in our country who identified one problem and said that when One Rupee was sent from Delhi, only 15 paise reached the bottom...who was getting the 15 paise this everyone can understand...at that time there was only party from… pic.twitter.com/U2M3bd6Myt