ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆ ಪೊಲೀಸ್ ಠಾಣೆ ಮೇಲೆ ಗ್ರೇನೇಡ್ ದಾಳಿ ನಡೆಸಿದ್ದ ಖಲಿಸ್ತಾನಿ ಉಗ್ರರನ್ನ ಎನ್‌ಕೌಂಟರ್ ಮಾಡಲಾಗಿದೆ.. ಆರೋಪಿಗಳನ್ನು ಪಂಜಾಬ್‌ನ ಗುರುದಾಸ್‌ಪುರ ನಿವಾಸಿಗಳಾದ ಗುರ್ವಿಂದರ್ ಸಿಂಗ್, ವೀರೇಂದ್ರ ಸಿಂಗ್ ಮತ್ತು ಜಸ್‌ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಮೂವರೂ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ನಿಷೇಧಿತ ಸಂಘಟನೆಗೆ ಸೇರಿದವರಾಗಿದ್ದರು ಎನ್ನಲಾಗಿದೆ.. ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಮೂವರನ್ನ ಕಥೆ ಮುಗಿಸಿದ್ದಾರೆ.. ಎನ್‌ಕೌಂಟರ್‌ನಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿತ್ತು ತಕ್ಷಣ ಚಿಕಿತ್ಸೆಗಾಗಿ ಸಿಎಚ್‌ಸಿ ಪುರನ್‌ಪುರಕ್ಕೆ ರವಾನಿಸಲಾಗಿತ್ತು.. ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಉಗ್ರರಿಂದ ಎರಡು ಎಕೆ-47 ರೈಫಲ್, ಎರಡು ಪಿಸ್ತೂಲ್, ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ..
#WATCH | A joint operation of UP Police and Punjab Police has led to an encounter in Pilibhit with three module members involved in grenade attacks at police establishments in Punjab's Gurdaspur. The injured persons have been taken to CHC Puranpur for medical treatment. Two AK… pic.twitter.com/GI1lcDb4Cx