ದೇಶ

ಬಾಂಗ್ಲಾದಲ್ಲಿ ಮತ್ತೆ ಮೂವರು ಸನ್ಯಾಸಿಗಳ ಬಂಧನ..!

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುತ್ತಲೇ ಇಲ್ಲ. ಇದೀಗ ಮತ್ತೆ ಮೂವರು ಸನ್ಯಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುತ್ತಲೇ ಇಲ್ಲ. ಇಸ್ಕಾನ್‌ ದೇಗುಲಗಳನ್ನ ಧ್ವಂಸಗೊಳಿಸಿದ್ರು. ಅದಲ್ಲದೇ ಇದೀಗ ಮತ್ತೆ ಮೂವರು ಸನ್ಯಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಓರ್ವ ಸನ್ಯಾಸಿ ನಾಪತ್ತೆಯಾಗಿದ್ದು ಕಳವಳ ವ್ಯಕ್ತವಾಗುತ್ತಿದೆ. ಇದರ ನಡುವೆ ಬಾಂಗ್ಲಾ ಪ್ರಜೆಗಳ ಅಟ್ಟಹಾಸ ಮತ್ತೆ ಅತಿರೇಕಕ್ಕೆ ಹೋದಂತಾಗಿದೆ. 

ಈಗಾಗಲೇ ಸನ್ಯಾಸಿ ಚಿನ್ಮ ಕೃಷ್ಣ ದಾಸ ಅವರು ಬಾಂಗ್ಲಾದಲ್ಲಿ ಬಂಧನವಾಗಿದ್ದಾರೆ. ಬಂಧಿತರನ್ನು ಭೇಟಿಯಾಗಲು ತೆರಳಿದ್ದಾಗ ಆದಿನಾಥ್‌ ಪ್ರಭು, ರಂಗನಾಥ ದಾಸ್‌ ಮತ್ತು ಶ್ಯಾಮ್‌ ಪ್ರಭು ಎಂಬುವರನ್ನು ಬಂಧಿಸಲಾಗಿದೆ.