ಕರ್ನಾಟಕ

ಬೆಳ್ಳಂ ಬೆಳಗ್ಗೆ ದರ್ಶನ ನೀಡಿದ ಹುಲಿರಾಯ

ಇಂದು ಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರು, ದಟ್ಟ ಅರಣ್ಯದಲ್ಲಿ ವಿರಮಿಸುತ್ತಾ ಮಲಗಿದ್ದ ಹುಲಿಯ ದೃಶ್ಯ ಸೆರೆ ಹಿಡಿದಿದ್ದಾರೆ.

ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅಭಯಾರಣ್ಯದಲ್ಲಿ, ಬೆಳ್ಳಂ ಬೆಳಗ್ಗೆ ಭಾರಿ ಗಾತ್ರದ ಹುಲಿ ದರ್ಶನವಾಗಿದೆ. ಇಂದು ಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರು, ದಟ್ಟ ಅರಣ್ಯದಲ್ಲಿ ವಿರಮಿಸುತ್ತಾ ಮಲಗಿದ್ದ ಹುಲಿಯ ದೃಶ್ಯ ಸೆರೆ ಹಿಡಿದಿದ್ದಾರೆ. 

ಉತ್ತಮ ಮಳೆಯಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಅಭಯಾರಣ್ಯ, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ವನ್ಯಜೀವಿಗಳ ಕಾಣಲು ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ದರ್ಶನ ನೀಡಿ, ವನ್ಯಜೀವಿಗಳು ಖುಷಿ ನೀಡುತ್ತಿವೆ.