ದೇಶ

ಸುಂಕ ಸಮರದ ಮಧ್ಯೆ ಮೋದಿ - ಟ್ರಂಪ್‌ ಭೇಟಿ ಟೈಂ ಫಿಕ್ಸ್‌.. ಏನೆಲ್ಲಾ ಚರ್ಚೆ ಆಗುತ್ತೆ..?

ಭಾರತ ಮಾತುಕತೆ ಪ್ರಾರಂಭಿಸುವುದಕ್ಕೂ ಮುಂಚೆಯೇ ಅಮೆರಿಕದಿಂದ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಸಿ -17 ವಿಮಾನದ ಮೂಲಕ ಭಾರತಕ್ಕೆ ವಲಸಿಗರನ್ನು ಕಳುಹಿಸಲಾಗುತ್ತಿದೆ. ಅಮೆರಿಕ ಇದೇ ಮೊದಲ ಬಾರಿ ದೊಡ್ಡಮಟ್ಟದ ಗಡಿಪಾರು ಯೋಜನೆಯನ್ನು ಹಾಕಿಕೊಂಡಿದೆ.

ಅಂತೂ-ಇಂತೂ ಪ್ರಧಾನಿ ಮೋದಿ ಅಮೆರಿಕೆಗೆ ತೆರಳಲು ಮುಹೂರ್ತ ನಿಗಧಿಯಾಗಿದೆ. ಟ್ರಂಪ್‌ ಭೇಟಿಯಾಗಿ ಏನೆಲ್ಲಾ ಚರ್ಚೆ ಮಾಡ್ತಾರೆ ಅನ್ನೋ ಸಸ್ಪೆನ್ಸ್‌ ಹೆಚ್ಚಾಗಿದೆ. ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ-ಕಲ್ಲೋಲವೇ ಶುರು ಆಗಿದೆ. ಅದರಲ್ಲಿಯೂ ಭಾರತೀಯ ಅಕ್ರಮ ವಲಸಿಗರೂ ಸೇರಿ ವಿಶ್ವದ ದೊಡ್ಡಣ್ಣನ ನೆಲದಲ್ಲಿರುವ ವಿವಿಧ ದೇಶಗಳ ಜನರು ತಮ್ಮ ಮುಂದಿನ ಕಥೆ ಏನಪ್ಪಾ ಅಂತಿದ್ದಾರೆ. ಅಷ್ಟೇ ಅಲ್ಲ. ಟ್ರಂಪ್ ಆರಂಭಿಸಿದ ಟ್ರೇಡ್ ವಾರ್‌ನ ಪರಿಣಾಮ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ನೆಲಕಚ್ಚಿದೆ. ಇದಿಷ್ಟೇ ಅಲ್ಲ.. ಭಾರತ ಸೇರಿ ವಿವಿಧ ದೇಶಗಳ ಮೇಲೆ ಹೆಚ್ಚಿನ ಟ್ಯಾಕ್ಸ್‌ ಹಾಕೋಕೆ ಮುಂದಾಗಿರೋದು ಮತ್ತಷ್ಟೂ ಆತಂಕಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಅಂತಾರಾಷ್ಟ್ರೀಯ ಬೆಳವಣಿಗೆ ಮಧ್ಯೆ ಟ್ರಂಪ್‌ ಭೇಟಿಗೆ ಮೋದಿ ಹೊರಟು ನಿಂತಿರೋದು ಭಾರತ ಮತ್ತು ಅನಿವಾಸಿ ಭಾರತೀಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಹೌದು.. ವಿಶ್ವದ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್‌ ಬಂದು ಕೂತಾಗಿದೆ. ಪ್ರೆಸಿಡೆಂಟ್‌ ಆಗ್ತಿದ್ದಂತೆ ಟ್ರಂಪ್‌ ಕೈಕೊಂಡಿರುವ ನಿರ್ಧಾರಗಳಿಗೆ ಭಾರತ ಸೇರಿ ಹಲವು ರಾಷ್ಟ್ರಗಳು ಬೆಚ್ಚಿಬಿದ್ದಿವೆ. ಅಮೆರಿಕದಲ್ಲಿ ಹಿಂದೆಂದೂ ಕಂಡು ಕೇಳದ ಕಠಿಣ ಆಡಳಿತ ಶುರುವಾಗಿದ್ದು, ಅಕ್ರಮ ವಲಸಿಗರಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಭಾರತೀಯ ಅಕ್ರಮ ವಲಸಿಗರಿಗೆ ಟ್ರಂಪ್ ಶಾಕ್‌ ಕೊಟ್ಟಿದ್ದಾರೆ. ಅನಧಿಕೃತವಾಗಿ ಅಲ್ಲದೇ ವೀಸಾ ಅವಧಿ ಮುಗಿದ ಮೇಲೂ ಅಮೆರಿಕದಲ್ಲೇ ಇರುವ ವಲಸಿಗರನ್ನ ದೇಶದಿಂದ ಹೊರಹಾಕಲು ಮುಂದಾಗಿದ್ದು, ಭಾರತೀಯರಿಗೆ ಆತಂಕ ಶುರು ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್‌ ಭೇಟಿಗೆ ಹೊರಡಲು ಸಿದ್ಧವಾಗಿದ್ದಾರೆ.

ಭಾರತ ಮಾತುಕತೆ ಪ್ರಾರಂಭಿಸುವುದಕ್ಕೂ ಮುಂಚೆಯೇ ಅಮೆರಿಕದಿಂದ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಸಿ -17 ವಿಮಾನದ ಮೂಲಕ ಭಾರತಕ್ಕೆ ವಲಸಿಗರನ್ನು ಕಳುಹಿಸಲಾಗುತ್ತಿದೆ. ಅಮೆರಿಕ ಇದೇ ಮೊದಲ ಬಾರಿ ದೊಡ್ಡಮಟ್ಟದ ಗಡಿಪಾರು ಯೋಜನೆಯನ್ನು ಹಾಕಿಕೊಂಡಿದೆ. ಪ್ರಾರಂಭದ ಹಂತದಲ್ಲಿ ಅಂದಾಜು 5,000 ಸಾವಿರ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಿದ್ದು. ಇದಕ್ಕಾಗಿ ಅಮೆರಿಕದ ಮಿಲಿಟರಿಯ ಪೆಂಟಗನ್ ವಿಮಾನವನ್ನು ಬಳಸಲಾಗುತ್ತಿದೆ.

ವಲಸಿಗರ ಗೋಳಾಟ ಒಂದೆಡೆಯಾದ್ರೆ ಮತ್ತೊಂದೆಡೆ ಸುಂಕ ಸಮರ ಬಹುತೇಕ ರಾಷ್ಟ್ರಗಳ ನಿದ್ದೆಗೆಡಿಸಿದೆ. ಕೆನಡಾ ಮತ್ತು ಮೆಕ್ಸಿಕನ್ ಆಮದುಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ವಿಧಿಸಲಾಗಿದೆ. ಚೀನಾದ ಐಟಂಗಳ ಮೇಲೂ ಶೇಕಡಾ 10ರಷ್ಟು ಹೆಚ್ಚುವರಿ ಟ್ಯಾಕ್ಸ್‌ ಹಾಕೋದಾಗಿ ಟ್ರಂಪ್‌ ಗುಡುಗಿದ್ದಾರೆ.. ಈ ಮೂಲಕ ಭಾರತಕ್ಕೂ ಎಚ್ಚರಿಕೆ ರವಾನಿಸಿದ್ದಾರೆ. ಇನ್ನು ಅಮೆರಿಕ ಡಾಲರ್‌ ಎದುರು ಭಾರತ ರೂಪಾಯಿ ದಿನದಿಂದ ದಿನಕ್ಕೆ ಮೌಲ್ಯ ಕಳೆದುಕೊಳ್ತಿದೆ. ಡಾಲರ್‌ ಎದುರು ನಿಲ್ಲಲಾಗದೇ ಹೆಣಗಾಡುತ್ತಿದೆ.. ಇದೆಲ್ಲದರ ಮಧ್ಯೆ ಇದೀಗ ಮೋದಿ - ಟ್ರಂಪ್‌ ಭೇಟಿಯಾಗ್ತಿದ್ದಾರೆ.

ಇದೇ ಫೆಬ್ರವರಿ 12ರಂದು ಮೋದಿ ಅಮೆರಿಕ ನೆಲದಲ್ಲಿ ಇಳಿಯಲಿದ್ದಾರೆ.. ಟ್ರಂಪ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.. ಅಕ್ರಮ ವಲಸಿಗರು, ಸುಂಕ ಸಮರ, ಎಐ ಟೆಕ್ನಾಲಜಿ, ರಕ್ಷಣಾ ಒಪ್ಪಂದ, ಇಂಡೋ-ಪೆಸಿಫಿಕ್ ಸಾಗರದಲ್ಲಿ ಗಸ್ತು, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ-ಯುಎಸ್ ಪಾಲುದಾರಿಕೆಗೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ. ಅಲ್ಲದೇ ಮೋದಿ ಅಮೆರಿಕ ಭೇಟಿ,, ಚೀನಾ ಮತ್ತು ಪಾಕಿಸ್ತಾನದ ಮೇಲೆ ಹೇಗೆ ಎಫೆಕ್ಟ್‌ ಮಾಡಲಾಗಿದೆ ಅಂತಾನೂ ನೋಡ್ಬೇಕಿದೆ. ಏನೇ ಇರಲಿ.. ಟ್ರಂಪ್‌ ಅಮೆರಿಕ ಭೇಟಿ ಭಾರತ ಮತ್ತು ಅನಿವಾಸಿ ಭಾರತೀಯರಲ್ಲಿ ನಿರೀಕ್ಷೆ ಹೆಚ್ಚಿಸೋದಂತು ಸುಳ್ಳಲ್ಲ..