ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆಗೆ ನಮ್ಮ ಬಣದಿಂದ ಸ್ಪರ್ಧೆ ಮಾಡೋದು ಪಕ್ಕಾ, ಆದರೆ ಯಾರು ಕಣಕ್ಕೆ ಇಳಿಯಬೇಕು ಎಂದು 2-3 ದಿನಗಳಲ್ಲಿ ತೀರ್ಮಾನ ಮಾಡ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಯತ್ನಾಳ್, ದೆಹಲಿಯಲ್ಲೂ ಮೀಟಿಂಗ್ ಮಾಡಬೇಕು ಅಂತ ಅಂದುಕೊಂಡಿದ್ದೇವೆ, ಹಿರಿಯ ನಾಯಕರು, ಸಂಸದರ ಅಭಿಪ್ರಾಯ ಕೂಡ ಪಡೆಯದೇ ಜಿಲ್ಲಾಧ್ಯಕ್ಷರ ನೇಮಕ ಆಗಿದೆ, ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೆ ಅಂತ ನೋಡಲು 2 ದಿನಗಳ ಸಮಯ ತೆಗೆದುಕೊಂಡಿದ್ದೇವೆ, ಯಾವುದೇ ಸಮುದಾಯಕ್ಕೂ ಅನ್ಯಾಯ ಆಗದಂತೆ ಒಂದು ತೀರ್ಮಾನ ದೆಹಲಿಯಲ್ಲೇ ತೆಗೆದುಕೊಳ್ತೇವೆ ಎಂದಿದ್ದಾರೆ.
ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಪೂರ್ಣವಾಗಿ ವಿರೋಧ ಇದ್ದೇವೆ, ಜಿಲ್ಲಾಧ್ಯಕ್ಷರ ನೇಮಕಕ್ಕೆ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಸಿ.ಟಿ. ರವಿ ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾ? ನಾಯಕತ್ವ ಅಂದ್ರೆ ಒಂದು ಟೀಮ್ ನಾಯಕ ಅಲ್ಲ. ರಾಜ್ಯ ಬಿಜೆಪಿಯ ನಾಯಕ ಆಗಬೇಕು, ಅದು ಕಾಣ್ತಿಲ್ಲ. ಬಿ.ವೈ. ವಿಜಯೇಂದ್ರರಲ್ಲಿ ಉದ್ಧಟತನ ಮಾತ್ರ ಕಾಣ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ನಾವು ಒಂದು ನಿರ್ಧಾರ ಮಾಡಿದ್ದೇವೆ.. ಇದು ಡು ಆರ್ ಡೈ. ಇದು ಯುದ್ಧ.. ಅದರಿಂದ ಹಿಂದೆ ಸರಿಯುವುದೇ ಇಲ್ಲ, ಒಂದು ಕಾಲದಲ್ಲಿ ಇತ್ತು ಬಿಎಸ್‌ವೈ ಇಲ್ಲ ಅಂದ್ರೆ ಬಿಜೆಪಿ ಇಲ್ಲ ಅಂತ, ಆದ್ರೆ ಕಾಲ ಬದಲಾಗಿದೆ. ಬಿಎಸ್‌ವೈ ಕುಟುಂಬ ಇಲ್ಲದೇ ಇದ್ರೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.