ಮೈಸೂರು : ಇತ್ತೀಚಿಗೆ ಫೈನಾನ್ಸ್ ನಿಂದ ಸಾಲ ಪಡೆದು ವಾಪಸ್ ಕಟ್ಟಲಾಗದೇ, ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗ್ತಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಹುಣಸೂರಿನ ಫಾರ್ಚುನ್ ಮೈಕ್ರೋ ಫೈನಾನ್ಸ್ ನಿಂದ ಸುಶೀಲ ಎಂಬುವವರು ಸಾಲ ಪಡೆದಿದ್ದರು. ಪ್ರತಿ ತಿಂಗಳು ಸಕಾಲದಲ್ಲಿ ಸಾಲ ವಾಪಸ್ ಮಾಡುತ್ತಿದ್ದರು. ಆದ್ರೆ ಈ ವಾರ ಸಾಲ ಪಾವತಿ ವಿಳಂಬ ಹಿನ್ನೆಲೆ ಫೈನಾನ್ಸ್‌ನವರು ಮನೆ ಬಳಿ ಬಂದು ಗಲಾಟೆ ಮಾಡಿದ್ದರು.
ಈ ಕಾರಣಕ್ಕೆ ಮನನೊಂದ ಸುಶೀಲ ಕ್ರಿಮಿನಾಶಕ ಕಾಳಿನ ಮಾತ್ರೆ ನುಂಗಿ ಸೂಸೈಡ್‌ಗೆ ಯತ್ನಿಸಿದ್ದಾರೆ. ಕಾಳಿನ ಕ್ರಿಮಿನಾಶಕ ಸೇವಿಸಿ ಅಸ್ವಸ್ತಗೊಂಡಿದ್ದ ಸುಶೀಲರನ್ನ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಸುಶೀಲಮ್ಮನವರ ಪುತ್ರ ನವೀನ್ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.