ಜೋತಿಷ್ಯ
ಈ ದಿನದ ಭವಿಷ್ಯ
ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಕುಟುಂಬದಲ್ಲಿ ಸಂತೋಷದ ದಿನವಾಗಲಿದೆ. ವ್ಯವಹಾರಕ್ಕಿಂತ ಹೆಚ್ಚು ಸಮಯ ಸಂಗಾತಿಯೊಂದಿಗೆ ಕಳೆಯಲಿದ್ದೀರಾ? ನಿಮ್ಮ ಹೊಸ ಯೋಜನೆಗಳಿಗೆ ಇಂದು ಉತ್ತಮ ಬೆಳವಣಿಗೆ ಆಗಲಿದೆ.
ವೃಷಭ ರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚು ಕಲಿಕೆ ಕಡೆ ಒಲವು ಇರಲಿ. ಪರೀಕ್ಷೆ ರೀತಿ ಸಂದರ್ಭಗಳು ಎದುರಾಗಲಿದೆ. ವಾಹನಗಳ ಸಂಚಾರದಲ್ಲೂ ಗಮನ ಕೊಡಿ. ಸ್ನೇಹಿತರನ್ನ ನಂಬಿ ಕೆಲಸದ ಎಲ್ಲ ಭಾರವನ್ನ ಬೇರೆಯವರಿಗೆ ಕೊಡಬೇಡಿ.
ಮಿಥುನ ರಾಶಿ
ಇಂದು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ನಿಮ್ಮ ಹಳೆಯ ತಪ್ಪುಗಳು ಇಂದು ಕಾಡುವ ಸಂದರ್ಭಗಳು ಎದುರಾಗಬಹುದು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚು ಜನ ಬೆಂಬಲ ಕಾರ್ಯಗಳು ಲಭಿಸಲಿದೆ.
ಕರ್ಕ ರಾಶಿ
ಗಣ್ಯ ವ್ಯಕ್ತಿಗಳ ಸ್ನೇಹಿತ ಸಂಪರ್ಕ ಸಿಗಲಿದೆ. ಸಿಗುವ ಎಲ್ಲ ಅವಕಾಶಗಳನ್ನ ಸದಬಳಕೆ ಮಾಡಿಕೊಳ್ಳಿ. ನಿಮ್ಮ ಶ್ರಮ ಇಂದು ಫಲ ನೀಡಲಿದೆ. ಕಚೇರಿಗಳಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಲಿದ್ದಾರೆ.
ಸಿಂಹ ರಾಶಿ
ಅದ್ಭುತ ಅವಕಾಶಗಳು ಕೈಗೆ ಸಿಕ್ಕಂತೆ ಸಿಕ್ಕಿ ಮತ್ತೆ ಮಾಯವಾಗಬಹುದು. ನಿಮ್ಮ ಸಹಪಾಠಿಗಳಿಗೆ ನಿಮಗೆ ಪೈಪೋಟಿ ನೀಡಿ ಗೆಲ್ಲಬಹುದಾಗಿದೆ. ಸಾಧ್ಯವಾದಷ್ಟು ಕೆಲಸಗಳಲ್ಲಿ ಯಶಸ್ವಿಗಾಗಿ ತಪ್ಪದೇ ವಿಘ್ನ ನಿವಾರಕ ಗಣೇಶನ ಪೂಜೆ ಮಾಡಿ
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರಿಗೆ ಮಿಶ್ರಫಲ . ವಧು – ವರರ ಅನ್ವೇಷಣೆಯಲ್ಲಿರುವವರಿಗೆ ಶುಭಫಲ . ನಿಮ್ಮ ಭವಿಷ್ಯತ್ ಯೋಜನೆಗಳಿಗೆ ದೂರದ ಸಂಬಂಧಿಕರೇ ನೆರವು ನೀಡುತ್ತಾರೆ.
ತುಲಾ ರಾಶಿ
ಅದೃಷ್ಟವೆಂದರೆ ಅದು ನಿಮ್ಮದೇ . ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿಮ್ಮನ್ನ ಟೀಕಿಸಿದವರೇ ನಿಮ್ಮನ್ನ ಹೊಗಳಲಿದ್ದಾರೆ. ಮನೆಯಲ್ಲಿ ನಿಮಗೆ ಉತ್ತಮ ಗೌರವ ಸಿಗಲಿದೆ. ವಿಶಿಷ್ಟ ಔತಣ ಅಂಗವಾಗಿ ನಿಮಗೆ ಮನೋಲ್ಲಾಸಕಾರವಾದ ಭೋಜನ ಸಿಗುವ ಯೋಗ ಇದೆ.
ವೃಶ್ಚಿಕ ರಾಶಿ
ಶತ್ರೃಗಳ ಕಣ್ಣು ನಿಮ್ಮ ಮೇಲೆ ಇದೆ. ನಿಮ್ಮ ಶ್ರಮವನ್ನ ಕಂಡು ನಿಮ್ಮ ವಿರೋಧಗಳು ಕೊಂಚ ಎದರುವಂತಹ ದಿನವಿದು. ನಿಮ್ಮ ಕರ್ತವ್ಯದತ್ತ ಗಮನ ಕೊಡಿ ಯಶಸ್ಸು ನಿಮ್ಮನ್ನ ಹಿಂಬಾಲಿಸಲಿದೆ.
ಧನು ರಾಶಿ
ನೀವು ಮುಚ್ಚಿಟ್ಟಿರುವ ಸತ್ಯಗಳು ಇಂದು ಹೊರ ಬರುವ ಸಾಧ್ಯತೆ ಇದೆ. ಭಯದ ಬದಲು ಇಂದು ನಿಮಗೆ ಈ ಸತ್ಯಗಳು ಧನಾತ್ಮಕ ಪರಿಣಾಮವನ್ನೇ ನೀಡುತ್ತದೆ. ನಿಮ್ಮ ಬಂಧುಗಳು ನಿಮ್ಮ ವಿರುದ್ಧ ಷಡ್ಯಂತ್ರ ಮಾಡಿದರು ಇಂದು ದೈವ ದರ್ಶನದಿಂದ ಉತ್ತಮ ಫಲಗಳು ಸಿಗಲಿದೆ.
ಮಕರ ರಾಶಿ
ನಿಮಗೆ ನಿಮ್ಮ ಆತ್ಮೀಯರ ನೆನಪು ಕಾಡಲಿದೆ. ಒಂಟಿತನವೂ ಸಂಬಂಧಗಳ ಮೌಲ್ಯವನ್ನ ತಿಳಿಸಲಿದೆ. ಸದ್ಯಕ್ಕಂತೂ ನಿಮ್ಮಲ್ಲಿರುವ ಹಣವನ್ನ ಕಳೆದುಕೊಳ್ಳದಿರಿ. ಹಣ ಈಗ ಒಳಹರಿವು ಇದ್ದು , ಖರ್ಚಿನ ಸಮಯ ಸದ್ಯಕ್ಕೆ ದೂರವಿದೆ.
ಕುಂಭ ರಾಶಿ
ಗೆದ್ದಿರುವೆ ಎಂಬ ಭಾವನೆಯೇ ನಿಮ್ಮನ್ನ ಸೋಲಿನ ಕಡೆ ಕರೆದುಕೊಂಡ ಹೋಗದಿರಲಿ. ಇಂದು ಸಾಧ್ಯವಾದಷ್ಟು ಮೌನಕ್ಕೆ ಮೊರೆ ಹೋಗಿ. ನಿಮ್ಮ ಕುಟುಂಬ ಸದಸ್ಯರ ನಿಮ್ಮ ಮೇಲೆ ಅನುಮಾನ ಪಡುವ ಸನ್ನಿವೇಶಗಳು ಎದುರಾಗಲಿದೆ. ತಾಳ್ಮೆಯಿಂದ ಇರಿ.
ಮೀನ ರಾಶಿ
ನೀವು ಮಾಡಿದ ದಾನದ ಫಲ ನಿಮಗೆ ಇಂದು ಸಿಗಲಿದೆ. ಕಲಾತ್ಮಕ ಅಭಿರುಚಿ ಇರುವವರಿಗೆ ಇಂದು ಸನ್ಮಾನ ಸಾಧ್ಯತೆ. ರಸ್ತೆಗಳಲ್ಲಿ ಓಡಾಡುವಾಗ ಎಚ್ಚರಿಕೆ ಇರಲಿ. ಸಾಧ್ಯವಾದಷ್ಟು ಅನವಶ್ಯಕ ಓಡಾಟದಿಂದ ದೂರವೇ ಉಳಿಯಿರಿ.