ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಯಶಸ್ಸು ಸಿಗಬಹುದು.ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ಲಾಭವಿದೆ.
ವೃಷಭ ರಾಶಿ
ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಿರುತ್ತದೆ. ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯಬಹುದು. ಪ್ರೇಮ ಜೀವನವು ತುಂಬಾ ಸುಖಮಯವಾಗಿರುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರುವುದು ಉತ್ತಮ.
ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ತುಂಬಾ ಶುಭ ದಿನ. ಉದ್ಯೋಗದಲ್ಲಿರುವವರು ಅಧಿಕಾರಿಗಳ ಬೆಂಬಲ ಪಡೆಯಬಹುದು. ಇಂದು, ಸಣ್ಣ ಪುಟ್ಟ ಅಡೆತಡೆಗಳ ಹೊರತಾಗಿಯೂ, ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ.
ಕಟಕ ರಾಶಿ
ಇಂದು ನಿಮಗೆ ಪ್ರಗತಿಯ ದಿನವಾಗಲಿದೆ. ಉದ್ಯೋಗಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹಣ ಹೂಡಿಕೆಯ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು.
ಸಿಂಹ ರಾಶಿ
ಇಂದು ಸಿಂಹ ರಾಶಿಯವರಿಗೆ ಅನೇಕ ಆದಾಯದ ಮೂಲಗಳಿಂದ ಧನ ಲಾಭವಿದೆ. ವ್ಯಾಪಾರದ ಯಶಸ್ಸು ನಿಮ್ಮ ಪರವಾಗಿರಲಿದೆ. ಆದರೆ ಇಂದು ಯಾರಿಗೂ ದೊಡ್ಡ ಮೊತ್ತದ ಸಾಲ ನೀಡದಿರುವುದು ಒಳಿತು. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ.
ಕನ್ಯಾ ರಾಶಿ
ಈ ದಿನ ನಿಮಗೆ ಅದೃಷ್ಟ ಕೈ ಕೊಡಬಹುದು. ನಿಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಇಂದು ಯಾವುದೇ ವಿವಾದಗಳು ಉದ್ಭವಿಸಿದರೆ, ತಾಳ್ಮೆ ಮತ್ತು ಸಂಯಮದಿಂದ ಸಮಸ್ಯೆಗಳನ್ನು ನಿಭಾಯಿಸಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಅತಿಯಾದ ಖರ್ಚಿನಿಂದ ಅಪಾಯವಿದೆ ಅಪಾಯವನ್ನು ಎದುರಿಸುವಿರಿ.
ತುಲಾ ರಾಶಿ
ಇಂದು ನಿಮ್ಮಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಹೂಡಿಕೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ.
ವೃಶ್ಚಿಕ ರಾಶಿ
ಇಂದು ನಿಮಗೆ ಅದೃಷ್ಟ ಹೆಚ್ಚಾಗುವ ದಿನ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪರಿಸ್ಥಿತಿಗೆ ತಕ್ಕಂತೆ ಮಾತ್ರ ಖರ್ಚು ಮಾಡಿ.
ಧನು ರಾಶಿ
ಈ ದಿನವು ನಿಮಗೆ ಸಾಮಾನ್ಯವಾಗಿರುತ್ತದೆ. ಇಂದು ಹಣಕಾಸಿನ ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆ ಅಗತ್ಯ. ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ.
ಮಕರ ರಾಶಿ
ಇಂದು ಮಕರ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಏರಿಳಿತಗಳಿರಬಹುದು. ದಂಪತಿಗಳ ನಡುವೆ ಇರುವ ಕೆಲವು ಸಮಸ್ಯೆಗಳು ಇಂದು ಪರಿಹಾರವಾಗಬಹುದು. ವೃತ್ತಿಪರ ಜೀವನದಲ್ಲಿ ಕೆಲವು ಏರಿಳಿತಗಳು ಕಂಡುಬರಬಹುದು.
ಕುಂಭ ರಾಶಿ
ಇಂದು ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ಧನ ಲಾಭವಿದೆ, ಆದರೆ ವಾಹನಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ.
ಮೀನ ರಾಶಿ
ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ನಿಮ್ಮ ಕೆಲಸದಲ್ಲಿನ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ನಿಮ್ಮ ಮನಸ್ಸು ಕೆಲವು ಅನಗತ್ಯ ಭಯದಿಂದ ತೊಂದರೆಗೊಳಗಾಗಬಹುದು