ದೇಶ

ನಾಳೆ ರಾಷ್ಟ್ರೀಯ ಬಾಹ್ಯಾಕಾಶ ದಿನ.. ಇದೇ ಮೊದಲ ಬಾರಿಗೆ ಆಚರಣೆ

ಇದೇ ಮೊದಲ ಬಾರಿಗೆ ನೆಹರು ತಾರಾಲಯದಲ್ಲಿ, ನಾಳೆ ರಾಷ್ಟ್ರೀಯ ಭಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ.

ನಾಳೆ ದೇಶದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು, ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿದೆ. ಭಾರತ ಸರ್ಕಾರ ನಾಳೆ 'ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ'ಗೆ ಅಧಿಕೃತ ಚಾಲನೆ ನೀಡಲಿದೆ. ಕಳೆದ ವರ್ಷ ಇಡೀ ಜಗತ್ತೇ ಒಮ್ಮೆ ಭಾರತದ ಕಡೆ ನೊಡಿತ್ತು. ಒಂದು ವರ್ಷದ ಹಿಂದೆ ಅಂದರೆ ಆಗಸ್ಟ್ 23ರಂದು ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್, ಚಂದ್ರನ ದಕ್ಷಿಣ ಧ್ರುವದಲ್ಲಿನ 'ಶಿವ ಶಕ್ತಿ' ಬಿಂದುವಿನಲ್ಲಿ ಇಳಿದ ಸಾಧನೆಯನ್ನು ಸ್ಮರಿಸಲು ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನ  ಭಾರತದ ಮಹತ್ತರ ಬಾಹ್ಯಾಕಾಶ ಯೋಜನೆಗಳನ್ನು ಸ್ಮರಿಸಲು ಮತ್ತು ಯುವಜನತೆಯಲ್ಲಿ ಸ್ಪೂರ್ತಿ ತುಂಬಲು ಆಚರಿಸಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಭಾರತದ  ದೈನಂದಿನ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ. ಸಂವಹನ ಮತ್ತು ಹವಾಮಾನ ಮುನ್ಸೂಚನೆ, ನ್ಯಾವಿಗೇಶನ್ ಹಾಗೂ ವಿಪತ್ತು ನಿರ್ವಹಣೆಗೆ ಸಹಾಯವಾಗಿದೆ