ದೇಶ

ನಂಬೇಡ..ನಂಬೇಡ..ಗೂಗಲ್‌ ಮ್ಯಾಪ್‌ನ ನಂಬೇಡ..!

ಗೂಗಲ್‌ ಮ್ಯಾಪ್‌ ಹಾಕಿಕೊಂಡು ಕಾಡಿನಲ್ಲಿ ದಾರಿ ತಪ್ಪಿದವರನ್ನು, ಪೊಲೀಸರೇ ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದಾರೆ.

ಗೂಗಲ್‌ ಮ್ಯಾಪ್‌ ಹಾಕಿಕೊಂಡು ಕಾಡಿನಲ್ಲಿ ದಾರಿ ತಪ್ಪಿದವರನ್ನು, ಪೊಲೀಸರೇ ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಾಡಿಗುಂಜಿಯಲ್ಲಿ ನಡೆದಿದೆ. ಆಂಧ್ರಪ್ರದೇಶದಿಂದ ಗೋವಾಕ್ಕೆ ತೆರಳಿದ್ದ ಮಹಿಳೆ ಸೇರಿ ನಾಲ್ವರು, ಗೂಗಲ್‌ ಮ್ಯಾಪ್‌ನಿಂದ ಕಾಡಿನಲ್ಲಿ ಸಿಲುಕಿ ಫಜೀತಿ ಪಟ್ಟಿದ್ರು. ಮಧ್ಯರಾತ್ರಿ ದಾರಿ ತಪ್ಪಿ ಹತ್ತು ಕಿಲೋಮೀಟರ್‌ವರೆಗೂ ಹೋಗಿದ್ದರು. ರಸ್ತೆ ಮುಗಿದ ಬಳಿಕ ತಾವು ದಾರಿ ತಪ್ಪಿರುವುದು ಗೊತ್ತಾಗಿದೆ. ಈ ವೇಳೆ ಪೊಲೀಸರಿಎ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಸಿಬ್ಬಂದಿ ಹೋಗಿ ನಾಲ್ವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಬಳಿಕ ಮೂಖ್ಯರಸ್ತೆಗೆ ಕರೆತಂದು ಗೋವಾ ದಾರಿ ತೋರಿಸಿದ್ದಾರೆ. ಸ್ಥಳಕ್ಕೆ 112 ಸಿಬ್ಬಂದಿ ಹೋಗಿ ನಾಲ್ವರನ್ನ ಸುರಕ್ಷಿತವಾಗಿ ಕರೆದುಕೊಂಡು ಬಂದು ಗೋವಾ ರೂಟ್‌ ತೋರಿಸಿದ್ದಾರೆ.