ಕರ್ನಾಟಕ

ಬಂಗಾರಿ ಐಶ್ವರ್ಯಗೆ ಸಂಕಷ್ಟ ?

ಹಣಕಾಸಿನ ವರ್ಗವಣೆ ಸಂಬಂಧ ಇಡಿ ವಿಚಾರಣೆಗೆ ಶಿಫಾರಸ್ಸು

ಬೆಂಗಳೂರು -  ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಹೆಸರಿನಲ್ಲಿ ಐಶ್ವರ್ಯ ಗೌಡ ವಂಚನೆ ಪ್ರಕರಣ ಬಹುತೇಕ ಜಾರಿ ನಿರ್ದೇಶನಾಲಯಕ್ಕೆ ವಹಿಸುವ ಸಾಧ್ಯತೆ ಇದೆ. ಈ ಮೂಲಕ ಐಶ್ವರ್ಯಗೌಡಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ. ಐಶ್ವರ್ಯ ಮನೆಯಲ್ಲಿ ಸಿಕ್ಕಿದ್ದ ಅಪಾರ ಚಿನ್ನ, ಬೆಳ್ಳಿ, ಐಷಾರಾಮಿ ಕಾರುಗಳು , ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಾಂತರ ಹಣ ವಹಿವಾಟು ಪತ್ತೆಯಾಗಿದೆ. ಈ ವೇಳೆ ಹಲವು ದಾಖಲೆಗಳು ಸಿಕ್ಕಿರುವ ಬಗ್ಗೆ ಇಡಿ ಪತ್ರ ಬರೆಯಲಾಗಿದೆ. 

ಐಶ್ವರ್ಯ ಕೇಸ್‌ ಸಂಬಂಧ ತನಿಖಾಧಿಕಾರಿ ಭರತ್‌ ರೆಡ್ಡಿ ಇಡಿಗೆ ಪತ್ರ ಬರೆದಿದ್ದರು. ಹೀಗಾಗಿ ಐಶ್ವರ್ಯಗೆ ಡಬಲ್‌ ಸಂಕಷ್ಟ ಎದುರಾಗುವ ಸಾ‍ಧ್ಯತೆ ಇದೆ.