ತನ್ನ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದ ಅಮೆರಿಕಕ್ಕೆ ಕೆನಡಾ ತಿರುಗೇಟು ನೀಡಿದ್ದು, ಅಮೆರಿಕದ ಆಯ್ದ ಸರಕುಗಳ ಮೇಲೆ ಶೇಕಡಾ 25ರಷ್ಟು ತೆರಿಗೆ ವಿಧಿಸುತ್ತೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ.. ಅಕ್ಕ-ಪಕ್ಕದ ರಾಷ್ಟ್ರಗಳಾದ ಕೆನಡಾ ಮತ್ತು ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿದೆ.. ನಾವು ತೆರಿಗೆ ಹೆಚ್ಚಳ ವಿಚಾರ ಉಲ್ಬಣಗೊಳಿಸಲು ಬಯಸುವುದಿಲ್ಲ.. ನಾವು ಕೆನಡಾಗಾಗಿ, ಕೆನಡಾದ ಜನರಿಗಾಗಿ ಹಾಗೂ ಕೆನಡಾದ ಉದ್ಯೋಗದ ಪರವಾಗಿ ನಿಲ್ಲುತ್ತೇವೆ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.. ಚೀನಾದ ಮೇಲೆ ಹಾಗೂ ಕೆನಡಾದ ಇಂಧನ ಉತ್ಪನ್ನಗಳ ಮೇಲೆ ಅಮೆರಿಕವು 10 ಪರ್ಸೆಂಟ್ ಸುಂಕ ವಿಧಿಸುತ್ತಿದೆ. ಕೆನಡಾದ ಉಳಿತ ಉತ್ಪನ್ನಗಳು ಹಾಗೂ ಮೆಕ್ಸಿಕೋದ ಎಲ್ಲ ವಸ್ತುಗಳ ಆಮದು ಮೇಲೂ ಶೇಕಡ 25ರಷ್ಟು ತೆರಿಗೆಯನ್ನು ಟ್ರಂಪ್ ವಿಧಿಸುತ್ತಿದ್ದಾರೆ..