ದೇಶ

ಬಾಂಗ್ಲಾದೇಶದಂತೆ ಪಶ್ಚಿಮ ಬಂಗಾಳ ಮಾಡಲು ಯತ್ನ : ಗಿರಿರಾಜ್‌ ಸಿಂಗ್‌

ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೊಹಿಂಗ್ಯಾಗಳು ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದಾರೆ. ಮತ್ತು ಅವರ ಸಂಖ್ಯೆ ಪಶ್ಚಿಮ ಬಂಗಾಳದ ಮುಸ್ಲಿಮರಿಗಿಂತ ಹೆಚ್ಚಿದೆ.

ಬಾಂಗ್ಲಾದೇಶದ ನುಸುಳುಕೋರರನ್ನ ಪಶ್ಚಿಮಬಂಗಾಳಕ್ಕೆ BSF ಕಳುಹಿಸುತ್ತಿದೆ ಎನ್ನುವ ಮಮತಾ ಬ್ಯಾನರ್ಜಿ ಆರೋಪಕ್ಕೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶದಂತೆ ಮಾಡಲು ಬಯಸುತ್ತಾರೆ, ಅದಕ್ಕಾಗಿಯೇ ಅವರು ಗಡಿಯಲ್ಲಿ ದೇಶವನ್ನು ರಕ್ಷಿಸುವ ಬಿಎಸ್‌ಎಫ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೊಹಿಂಗ್ಯಾಗಳು ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದಾರೆ. ಮತ್ತು ಅವರ ಸಂಖ್ಯೆ ಪಶ್ಚಿಮ ಬಂಗಾಳದ ಮುಸ್ಲಿಮರಿಗಿಂತ ಹೆಚ್ಚಿದೆ. ಮಮತಾ ಬ್ಯಾನರ್ಜಿಗೆ ಧೈರ್ಯವಿದ್ದರೆ ಅವರು ಪಶ್ಚಿಮ ಬಂಗಾಳದಲ್ಲಿ NRC ಮತ್ತು CAA ಅನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.