ದೇಶ

ತಿರುಪತಿ ಅನ್ಯಧರ್ಮಿಯರ ಎತ್ತಂಗಡಿ !

ಟಿಟಿಡಿ ಉದ್ಯೋಗ ಹಿಂದೂಗಳಿಗೆ ರಿಸರ್ವ್​

ಹೈದರಾಬಾದ್ - ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಕಲಬೆರಿಕೆ ಪ್ರಕರಣ ಬಾರಿ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಸದ್ಯ ಟಿಟಿಡಿ ಹೊಸ ನಿಯಮ ಜಾರಿಗೆ ತಂದಿದೆ. ಈ ಪ್ರಕಾರ ಹಿಂದೂಗಳಿಗೆ ಮಾತ್ರ ಟಿಟಿಡಿಯಲ್ಲಿ ಉದ್ಯೋಗ ಕಲ್ಪಿಸಬೇಕೆಂದು ಸೂಚಿಸಿದೆ. 

ಸದ್ಯ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಡಳಿತ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಿರುಪತಿಯಲ್ಲಿ ಅನ್ಯಧರ್ಮಿಯರು ಕೆಲಸ ನಿರ್ವಹಿಸುತ್ತಿದರು. ಸದ್ಯಕ್ಕೆ ಟಿಟಿಡಿ ಹೊಸ ನಿರ್ಧಾರದಿಂದ ಬಹಳಷ್ಟು ಅನ್ಯಧರ್ಮಿಯರ ಕೆಲಸಕ್ಕೆ ಕುತ್ತು ಬರಲಿದೆ. ಟಿಟಿಡಿ ನೂತನ ಅಧ್ಯಕ್ಷ ಬಿ.ಆರ್.ನಾಯ್ಡು ಈ ಆದೇಶವನ್ನ ಹೊರಡಿಸಿದ್ದಾರೆ.