ಕರ್ನಾಟಕ

ಉದಯಗಿರಿ ಪ್ರಕರಣ : ಮತ್ತಷ್ಟು ಆರೋಪಿಗಳ ಬಂಧನವಾಗಲಿದೆ:‌ ಜಿ. ಪರಮೇಶ್ವರ್

ಫೆಬ್ರವರಿ 24ಕ್ಕೆ ಉದಯಗಿರಿಯಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಹಿಸಿದ ಪರಮೇಶ್ವರ್‌, ಅವರಿಗೆ ಪ್ರತಿಯೊಂದರಲ್ಲೂ ರಾಜಕಾರಣ ಮಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮೌಲ್ವಿ ಬಂಧನ ವಿಚಾರಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪರಮೇಶ್ವರ್‌, ಸಿಸಿ ಕ್ಯಾಮೆರಾ ಆಧರಿಸಿ ಮೌಲ್ವಿಯವರನ್ನ ಬಂಧನ ಮಾಡಿದ್ದಾರೆ. ಒಂದೆರಡು ದಿನದಲ್ಲಿ ಬಂಧನ ಮಾಡಿದ್ರು. ಮೌಲ್ವಿ ಮಾತಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಂದಿತ್ತು. ಅದನ್ನ ನೋಡಿ ಮೌಲ್ವಿ ಬಂಧನ ಮಾಡಿದ್ದಾರೆ. ಇನ್ನೂ ಸಿಸಿ ಕ್ಯಾಮೆರಾ ನೋಡಿ ಮತ್ತಷ್ಟು ಆರೋಪಿಗಳ ಬಂಧನ ಆಗಲಿದೆ ಎಂದಿದ್ದಾರೆ.

ಫೆಬ್ರವರಿ 24ಕ್ಕೆ ಉದಯಗಿರಿಯಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಹಿಸಿದ ಪರಮೇಶ್ವರ್‌, ಅವರಿಗೆ ಪ್ರತಿಯೊಂದರಲ್ಲೂ ರಾಜಕಾರಣ ಮಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.