ವಿದೇಶ

ಗುರುದ್ವಾರಗಳ ಮೇಲೆ ಅಮೆರಿಕ ಅಧಿಕಾರಿಗಳ ದಾಳಿ.. ಅಕ್ರಮ ವಲಸಿಗರಿಗೆ ಶಾಕ್‌..!

ಗುರುದ್ವಾರಗಳಿಗೆ ಎಂಟ್ರಿ ಕೊಟ್ಟಿದ್ದ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (DHS) ಅಧಿಕಾರಿಗಳು, ಅಕ್ರಮ ವಲಸಿಗರ ಪತ್ತೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ನಿರ್ಧಾರವು ಹಲವಾರು ಸಿಖ್ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅವರು ಇಂತಹ ಕ್ರಮಗಳನ್ನು ತಮ್ಮ ನಂಬಿಕೆಯ ಪವಿತ್ರತೆಗೆ ಬೆದರಿಕೆ ಎಂದು ಆರೋಪಿಸಲಾಗಿದೆ

ಡೊನಾಲ್ಡ್‌ ಟ್ರಂಪ್‌ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿದೆ. ಅಮೆರಿಕಗೆ ಬರುವ ಅಕ್ರಮ ವಲಸಿಗರ ಪತ್ತೆ ಸಲುವಾಗಿ ಮೊದಲ ಹಂತವಾಗಿ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿರುವ ಗುರುದ್ವಾರಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಗುರುದ್ವಾರಗಳಿಗೆ ಎಂಟ್ರಿ ಕೊಟ್ಟಿದ್ದ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (DHS) ಅಧಿಕಾರಿಗಳು, ಅಕ್ರಮ ವಲಸಿಗರ ಪತ್ತೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ನಿರ್ಧಾರವು ಹಲವಾರು ಸಿಖ್ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅವರು ಇಂತಹ ಕ್ರಮಗಳನ್ನು ತಮ್ಮ ನಂಬಿಕೆಯ ಪವಿತ್ರತೆಗೆ ಬೆದರಿಕೆ ಎಂದು ಆರೋಪಿಸಲಾಗಿದೆ. ಆದರೆ DHS ಅಧಿಕಾರಿಗಳು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.. ಕೊಲೆ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳಿಗೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಬಂಧಿಸಲು ಅಧಿಕಾರ ಇದೆ ಎಂದು ಹೇಳಿದ್ದಾರೆ. “ಅಪರಾಧಿಗಳು ಇನ್ನು ಮುಂದೆ ಬಂಧನವನ್ನು ತಪ್ಪಿಸಲು ಅಮೆರಿಕದ ಪ್ರಾರ್ಥನಾ ಮಂದಿರ ಮತ್ತು ಚರ್ಚ್‌ಗಳಲ್ಲಿ ಅಡಗಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.