ಕ್ರೀಡೆಗಳು
ಧಾರ್ಮಿಕ ಕಾರಣಕ್ಕೆ ಭಾರತ ಚೆಸ್ ಆಟಗಾರ್ತಿಗೆ ಕೈಕುಲುಕದ ಉಜ್ಬೇಕಿಸ್ತಾನದ ಆಟಗಾರ
ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ಭಾರತದ ಜಿ.ಎಂ.ಆರ್. ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡಲು ಎದುರಾಳಿ ನಿರಾಕರಿಸಿರುವ ಘಟನೆ ನಡೆದಿದೆ..
ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ಭಾರತದ ಜಿ.ಎಂ.ಆರ್. ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡಲು ಎದುರಾಳಿ ನಿರಾಕರಿಸಿರುವ ಘಟನೆ ನಡೆದಿದೆ.. ವೈಶಾಲಿ 4ನೇ ಸುತ್ತಿನ ಸ್ಪರ್ಧೆಯ ಪ್ರಾರಂಭಕ್ಕೂ ಮೊದಲು ಉಜ್ಬೇಕಿಸ್ತಾನದ ಗ್ರ್ಯಾಂಡ್ ಮಾಸ್ಟರ್ ನೋಡಿರ್ಬೆಕ್ ಯಾಕುಬ್ಬೋವ್ ಅವರಿಗೆ ವಿಶ್ ಮಾಡಲು ಕೈಯನ್ನು ಚಾಚಿದ್ದಾರೆ.. ಆದರೆ ಇದಕ್ಕೆ ಯಾಕುಬ್ಬೋವ್ ಪ್ರತಿಕ್ರಿಯಿಸದೆ ಕುಳಿತುಕೊಳ್ಳುವುದು ಚರ್ಚೆಗೆ ಕಾರಣವಾಗಿದೆ.. ಈ ಬಗ್ಗೆ ಚೆಸ್ ವಲಯದಲ್ಲಿ ಅಸಮಾಧನ ವ್ಯಕ್ತವಾದ ಬೆನ್ನಲ್ಲೇ 'X'ನಲ್ಲಿ ಪ್ರತಿಕ್ರಿಯೆ ನೀಡಿರುವ ಯಾಕುಬ್ಬೋವ್ ಅವರು,, ನಾನು ಧಾರ್ಮಿಕ ಕಾರಣಗಳಿಗಾಗಿ ಇತರ ಮಹಿಳೆಯರನ್ನು ಮುಟ್ಟುವುದಿಲ್ಲ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.. ನಾನು ವೈಶಾಲಿ ಮತ್ತು ಅವರ ಸಹೋದರ ಪ್ರಜ್ಞಾನಂದ ಅವರನ್ನು ಭಾರತದ ಪ್ರಬಲ ಚೆಸ್ ಆಟಗಾರರೆಂದು ಗೌರವಿಸುತ್ತೇನೆ. ನನ್ನ ನಡವಳಿಕೆಯಿಂದ ಬೇಜಾರಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ..