ದೇಶ

ಇಸ್ರೋ ನೂತನ ಅಧ್ಯಕ್ಷರಾಗಿ ವಿ. ನಾರಾಯಣನ್

ನಾರಾಯಣನ್ ಅವರು ಆದಿತ್ಯ ಬಾಹ್ಯಾಕಾಶ ನೌಕೆ ಮತ್ತು GSLV MK-III ಮಿಷನ್‌ನಂತಹ ಪ್ರಮುಖ ಯೋಜನೆಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ...

ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆ ಹೊಸ ಮೈಲಿಗಲ್ಲುಗಳನ್ನ ಸೃಷ್ಟಿಸುತ್ತಲೇ ಇದೆ.. ಇಸ್ರೋ ಹಾಲಿ ಮುಖ್ಯಸ್ಥ ಎಸ್.ಸೋಮನಾಥ್ ಅವರ ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆ ಜನವರಿ 14ರಂದು ನಿವೃತ್ತರಾಗಲಿದ್ದಾರೆ.. ಹೀಗಾಗಿ ಕೇಂದ್ರ ಸರ್ಕಾರವು, ಕ್ರಯೋಜೆನಿಕ್ ಎಂಜಿನ್ ತಜ್ಞ ವಿ.ನಾರಾಯಣನ್ ಅವರನ್ನು ಇಸ್ರೋದ ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ.. ನಾರಾಯಣನ್ ಪ್ರಸ್ತುತ ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಎಲ್‌ಪಿಎಸ್‌ಸಿಯ ನಿರ್ದೇಶಕರಾಗಿದ್ದಾರೆ.. ನಾರಾಯಣನ್ ಅವರು ಆದಿತ್ಯ ಬಾಹ್ಯಾಕಾಶ ನೌಕೆ ಮತ್ತು GSLV MK-III ಮಿಷನ್‌ನಂತಹ ಪ್ರಮುಖ ಯೋಜನೆಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ... ಇವರ ಪರಿಣತಿ ಮತ್ತು ಸಾಧನೆಗಳನ್ನು ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ.. ವಿ ನಾರಾಯಣನ್ ಅವರಿಗೆ ಬಾಹ್ಯಾಕಾಶ ಸುಮಾರು 4 ದಶಕಗಳ ಅನುಭವವಿದೆ.. ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ..