ಕರ್ನಾಟಕ

ವರುಣ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ.. ನಗುತ್ತಲೇ ಪೋಟೋಗೆ ಪೋಸ್ ಕೊಟ್ಟ ಸಿಎಂ

ನಾನು ಎರಡು ಬಾರಿ ಸಿಎಂ ಆಗಲು ವರುಣ ಕ್ಷೇತ್ರದ ಆಶೀರ್ವಾದ ದೊಡ್ಡದಿದೆ. 2018 ರಲ್ಲಿ ನಾನೇ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿಲ್ಲ. ವರುಣ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ ಅನಂತಾನಂತ ಧನ್ಯವಾದಗಳು. ವರುಣ ಕ್ಷೇತ್ರದ ಉಪಕಾರ ಯಾವತ್ತೂ ಮರೆಯಲು ಸಾಧ್ಯವಿಲ್ಲ. ವರುಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಮೈಸೂರು :  ಸಿಎಂ ಸಿದ್ದರಾಮಯ್ಯ ಅವರು ನಗು ನಗುತ್ತ ಸನ್ಮಾನ ಸ್ವೀಕಾರ ಮಾಡಿದ್ದು, ಜನರು ತಂದ ಹಾರ ಪೋಟೊ ಗಿಫ್ಟ್ ಪಡೆದು ಖುಷಿ ಪಟ್ಟಿದ್ದಾರೆ. ಹಾರ ಹಾಕಲು ಬಂದ ಸ್ಥಳಿಯರಿಂದ ಹಾರ ಹಾಕಿಸಿಕೊಂಡು ನಗು ನಗುತ್ತ ಪೋಟೋಗೆ ಪೋಸ್ ನೀಡಿದ್ದಾರೆ.

ವರುಣ ಕ್ಷೇತ್ರದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡಿದ್ದು, ನಾನು ಎರಡು ಬಾರಿ ಸಿಎಂ ಆಗಲು ವರುಣ ಕ್ಷೇತ್ರದ ಆಶೀರ್ವಾದ ದೊಡ್ಡದಿದೆ. 2018 ರಲ್ಲಿ ನಾನೇ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿಲ್ಲ. ವರುಣ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ ಅನಂತಾನಂತ ಧನ್ಯವಾದಗಳು. ವರುಣ ಕ್ಷೇತ್ರದ ಉಪಕಾರ ಯಾವತ್ತೂ ಮರೆಯಲು ಸಾಧ್ಯವಿಲ್ಲ. ವರುಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.