ವೈರಲ್

ಹೆಂಡತಿ ಮುಖ ನೋಡದೆ ಕೆಲಸ ಮಾಡೋಕಾಗುತ್ತಾ; ವಾಟಾಳ್‌ ನಾಗರಾಜ್‌ ಪ್ರಶ್ನೆ

ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ವಿಚಾರವನ್ನು ಹೋರಾಟಗಾರ ವಾಟಾಳ್‌ ನಾಗರಾಜ್ ಖಂಡಿಸಿದ್ದಾರೆ.

L&T ಮುಖ್ಯಸ್ಥರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿರುವ ವಿಚಾರವನ್ನು, ಹೋರಾಟಗಾರ ವಾಟಾಳ್‌ ನಾಗರಾಜ್ ಖಂಡಿಸಿದ್ದಾರೆ. ಸುಬ್ರಮಣಿ ಹಾಗೂ ನಾರಾಯಣಮೂರ್ತಿ ಅವರು ಹೇಳಿರುವುದು ತೀರ ಗಂಭೀರವಾದ ವಿಚಾರ. ಉದ್ಯೋಗಿಗಳು ಹೆಂಡತಿ ಮುಖ ನೋಡದೆ ಕೆಲಸ ಮಾಡೋಕೆ ಆಗುತ್ತಾ. ಇದು ರಾಷ್ಟ್ರದ ಮಹಿಳೆಯ ಮೇಲಿನ ದಬ್ಬಾಳಿಕೆ. ಸುಬ್ರಮಣಿ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ನಾರಾಯಣಮೂರ್ತಿ, ಸುಧಾಮೂರ್ತಿ ಹೇಳಿದ್ದೆಲ್ಲವೂ ಸರಿಯಲ್ಲ. ವಾರಕ್ಕೆ 48 ಗಂಟೆ ಸಮಯ ನಿಗದಿಯಾಗಿದೆ. ಇದನ್ನು ಮೀರಿ ಕೆಲಸ ಮಾಡೋಕೆ ಆಗುತ್ತಾ..? ಮನುಷ್ಯರು ಹೀಗೆಲ್ಲ ಕೆಲಸ ಮಾಡೋಕೆ ಆಗುತ್ತಾ. ಇದರಿಂದ ಆರೋಗ್ಯ ಕೆಡುತ್ತೆ ಎಂದು ಕಿಡಿ ಕಾರಿದ್ದಾರೆ.