ಹಿರಿಯ ನಟ ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರಾಗಿದಗದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಐದು ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪುತ್ರ ರೋಹಿತ್ ಮಾಹಿತಿ ನೀಡಿದ್ದಾರೆ.
76 ವರ್ಷ ವಯಸ್ಕರಾಗಿದ್ದ ಇವರಿಗೆ, ಕಫ ಹೆಚ್ಚಾಗಿದ್ದರಿಂದ ನೆಬಿಲೈಸೇಷನ್ ಮಾಡಲಾಗಿತ್ತು. ಇದರಿಂದ ಕಫ ಲಂಗ್ಸ್ ಸೇರಿದ್ದು, ಮಲ್ಟಿಪಲ್ ಆರ್ಗನ್ ಡ್ಯಾಮೇಜ್ ಆಗಿ ಈ ರೀತಿ ಸಮಸ್ಯೆ ಆಗಿದೆ ಎನ್ನಲಾಗುತ್ತಿದೆ.
ಟೈಗರ್ ಪ್ರಭಾಕರ್ ಅವರಿಗೆ ಆತ್ಮೀಯರಾಗಿದ್ದ ಸರಿಗಮ ವಿಜಿ , 1980ರಲ್ಲಿ ಗೀತಪ್ರಿಯ ನಿರ್ದೇಶನದ ಬೆಳವಳದ ಮಡಿಲಲ್ಲಿ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದರು. ಸುಮಾರು 269 ಸಿನಿಮಾಗಳಲ್ಲಿ ಇವರು ನಟಿಸಿದ್ದು , 80 ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. 2,400 ಧಾರಾವಾಹಿಗಳ ನಟನೆ ಮತ್ತು ನಿರ್ದೇಶನ ಮಾಡಿದ್ದಾರೆ.