ದೇಶ

ಬ್ಯಾಂಕ್​ಗಳ ವಿರುದ್ಧವೇ ಕೋರ್ಟ್‌​ ಮೆಟ್ಟಿಲೇರಿದ ವಿಜಯ್‌ ಮಲ್ಯ

ಬ್ಯಾಂಕ್‌ಗೆ ಕಟ್ಟಬೇಕಿರುವ ಹಣಕ್ಕಿಂತ ಹೆಚ್ಚಿನ ಸಾಲ ವಸೂಲಿ ಪ್ರಶ್ನಿಸಿ ಇದೀಗ ಬ್ಯಾಂಕ್​ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. 6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು, ಅದರಲ್ಲಿ 14,000 ಕೋಟಿ ರೂ. ವಸೂಲಾಗಿದೆ ಎಂದು ಲೋಕಸಭೆಯಲ್ಲಿ ಸ್ವತಃ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದರು.

ಆರ್ಥಿಕ ಅಪರಾಧಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬ್ಯಾಂಕ್‌ಗೆ ಕಟ್ಟಬೇಕಿರುವ ಹಣಕ್ಕಿಂತ ಹೆಚ್ಚಿನ ಸಾಲ ವಸೂಲಿ ಪ್ರಶ್ನಿಸಿ ಇದೀಗ ಬ್ಯಾಂಕ್ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. 6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು, ಅದರಲ್ಲಿ 14,000 ಕೋಟಿ ರೂ. ವಸೂಲಾಗಿದೆ ಎಂದು ಲೋಕಸಭೆಯಲ್ಲಿ ಸ್ವತಃ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಹೀಗಾಗಿ ಕೋರ್ಟ್‌ ಮೆಟ್ಟಿಲೇರಿರುವ ವಿಜಯ್‌ ಮಲ್ಯ, ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಲೋನ್‌ ರಿಕವರಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದಾರೆ. ಅಲ್ಲದೇ ಸಾಲ ವಸೂಲಿ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ. ಅರ್ಜಿ ಆಲಿಸಿದ ಹೈಕೋರ್ಟ್‌, ಬ್ಯಾಂಕ್ಗಳು ಹಾಗೂ ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದೆ.