ಕರ್ನಾಟಕ

ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಔಟ್‌..? ಒಳ್ಳೆ ಸುದ್ದಿ ಸಿಕ್ಕಿದೆ, ಫುಲ್‌ ಜೋಶ್‌ನಲ್ಲಿ ರೆಬೆಲ್ಸ್‌

ಜಿಲ್ಲಾಧ್ಯಕ್ಷರ ನೇಮಕ ಅಸಮಾಧಾನದಿಂದ ಹಿಡಿದು ಬಿ.ವೈ. ವಿಜಯೇಂದ್ರ ಮೇಲಿನ ಆರೋಪಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಜೆ.ಪಿ. ನಡ್ಡಾ, ಬಿ.ಎಲ್‌. ಸಂತೋಷ್‌ ಭೇಟಿಯಾಗಿ ಚರ್ಚೆ ನಡೆಸಿದ್ದು ಈ ಬೆನ್ನಲ್ಲೇ ಒಳ್ಳೆ ಸುದ್ದಿ ಸಿಕ್ಕಿದೆ ಅಂತಾ ಹೇಳಿರೋದು ಕುತೂಹಲ ಕೆರಳಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ರೆಬೆಲ್ಸ್‌ ಟೀಂ, ಇಂದೂ ದೆಹಲಿಯಲ್ಲಿ ವರಿಷ್ಠರ ಭೇಟಿಯಾಗಿದ್ದಾರೆ. ಹೈಕಮಾಂಡ್‌ ನಾಯಕರು ಶೀಘ್ರದಲ್ಲಿಯೇ ಗುಡ್‌ನ್ಯೂಸ್‌ ಕೊಡ್ತಾರೆ ಅಂತಾ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಸೇರಿ ಎಲ್ಲಾ ನಾಯಕರು ಫುಲ್‌ ಜೋಶ್‌ನಲ್ಲಿದ್ದಾರೆ. ಕಳೆದ 2 ದಿನಗಳಿಂದಲೂ ರೆಬೆಲ್ಸ್‌ ಟೀಂ ದೆಹಲಿಯಲ್ಲಿಯೇ ಬೀಡುಬಿಟ್ಟಿದೆ. ಜಿಲ್ಲಾಧ್ಯಕ್ಷರ ನೇಮಕ ಅಸಮಾಧಾನದಿಂದ ಹಿಡಿದು ಬಿ.ವೈ. ವಿಜಯೇಂದ್ರ ಮೇಲಿನ ಆರೋಪಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಜೆ.ಪಿ. ನಡ್ಡಾ, ಬಿ.ಎಲ್‌. ಸಂತೋಷ್‌ ಭೇಟಿಯಾಗಿ ಚರ್ಚೆ ನಡೆಸಿದ್ದು ಈ ಬೆನ್ನಲ್ಲೇ ಒಳ್ಳೆ ಸುದ್ದಿ ಸಿಕ್ಕಿದೆ ಅಂತಾ ಹೇಳಿರೋದು ಕುತೂಹಲ ಕೆರಳಿಸಿದೆ.