ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ, ಶಾಸಕ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಾಡಿದ ದ್ವೇಷ ರಾಜಕಾರಣ ನಾವ್ಯಾರು ಮಾಡಿಲ್ಲ. ಎಷ್ಟು ಜನಕ್ಕೆ ಎಷ್ಟು ಟಾರ್ಚರ್ ಮಾಡಿದ್ದಾರೆ ಗೊತ್ತಿದೆ ಎಂದು ಹೇಳಿದ್ದಾರೆ. ಮುನಿರತ್ನನ ವಿಚಾರದಲ್ಲಿ ಎನು ದ್ವೇಷದ ರಾಜಕೀಯ ಆಗಿದೆ. ಅವನು ಮಾತನಾಡಿ ಇದನ್ನೆಲ್ಲ ಮಾಡಿಕೊಂಡಿದ್ದಾನೆ ಎಂದರು.