ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇದೇ ವೇಳೆಯಲ್ಲೇ ತಮ್ಮ ಅನಾರೋಗ್ಯದ ಕುರಿತು ವಿನೋದ್ ಕಾಂಬ್ಳಿ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಚಿನ್ ತೆಂಡೂಲ್ಕರ್ ಜೊತೆಗೆ ಕಾಂಬ್ಳಿ ಕಾಣಿಸಿಕೊಂಡಿದರು. ಇಬ್ಬರ ಭೇಟಿಯ ವಿಡಿಯೊ ಸಾಕಷ್ಟು ವೈರಲ್ ಆಗಿತ್ತು. ಅದರಿಂದೀಚೆಗೆ ವಿನೋದ್ ಕಾಂಬ್ಳಿಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕಾಂಬ್ಳಿ ಆರೋಗ್ಯ ಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮರುಕ ವ್ಯಕ್ತಪಡಿಸುತ್ತಿದ್ದಾರೆ.
ಈಗ ಸ್ವತಃ ಕಾಂಬ್ಳಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. 52 ವರ್ಷದ ಕಾಂಬ್ಳಿ ಅವರ ಆರೋಗ್ಯ ಈಗ ಸ್ವಲ್ಪಮಟ್ಟಿಗೆ ಸುಧಾರಿಸಿದ್ದು, ಸುಮಾರು ಒಂದು ತಿಂಗಳ ಹಿಂದೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದ್ದೆ. ಮೂತ್ರದ ಸೋಂಕಿನಿಂದ ಬಳಲುತ್ತಿದ್ದೇನೆ. ಒಂದು ತಿಂಗಳ ಹಿಂದೆ ಅನಾರೋಗ್ಯದಿಂದಾಗಿ ತಲೆ ಸುತ್ತಿ ಬಿದ್ದಿದ್ದೆ. ಪತ್ನಿ ಮತ್ತು ಮಕ್ಕಳು ಅವರೊಂದಿಗೆ ಒತ್ತಾಸೆಯಾಗಿ ನಿಂತು ಆರೋಗ್ಯವನ್ನು ಸುಧಾರಿಸಲು ನೆರವಾಗಿದ್ದಾರೆ ಎಂದು ಕಾಂಬ್ಳಿ ಹೇಳಿಕೊಂಡಿದಾರೆ.
ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನನ್ನ ಹೆಂಡತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಅವಳು ನನ್ನನ್ನು ಸಾಕಷ್ಟು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾಳೆ. ‘ನೀನು ಫಿಟ್ ಆಗಬೇಕು’ ಎಂದು ಹೇಳುತ್ತಿರುತ್ತಾಳೆ ಎಂದಿದ್ದಾರೆ.