ಕುತ್ತಿಗೆ ನೋವಿನಿಂದಾಗಿ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇದೀಗ ಮುಂದಿನ ಪಂದ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.ಜ.30ರಂದು ನಡೆಯುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದು ಎನ್ನಲಾಗ್ತಿದೆ.
ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ರಿಷತ್ ಪಂಥ್ ಸೇರಿ ಬಹುತೇಕ ಆಟಗಾರರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರು. ಈ ಕಾರಣದಿಂದ ಬಿಸಿಸಿಐ, ಹಿರಿಯ ಆಟಗಾರರು ಕೂಡ ದೇಶೀಯ ಪಂದ್ಯವನ್ನಾಡುವುದು ಕಡ್ಡಾಯ ಎಂದು ಸೂಚಿಸಿತ್ತು... ಹೀಗಾಗಿ ಇದೀಗ ರಣಜಿಯಲ್ಲಿ ಟ್ರೋಫಿಯಲ್ಲಿ ಕಣಕ್ಕಿಳಿಯಲು ಕಿಂಗ್ ಕೊಹ್ಲಿ ಅಭ್ಯಾಸಕ್ಕಾಗಿ ಫಿಲ್ಡ್‌ಗೆ ಇಳಿದಿದ್ದಾರೆ.