ಕ್ರೀಡೆಗಳು

ಬಾಲ್ಯ ಸ್ನೇಹಿತನ ಭೇಟಿಯಾದ ವಿರಾಟ್‌.. ಬಾಲಕನ ಪ್ರಶ್ನೆಗೂ ಕಿಂಗ್‌ ಉತ್ತರ..!

ಪುಟಾಣಿಯ ಪ್ರಶ್ನೆಯನ್ನ ತಾಳ್ಮೆಯಿಂದಲೇ ಕೇಳಿದ ಕೊಹ್ಲಿ, ನಿನಗೆ ಪ್ರಾಕ್ಟೀಸ್‌ ಮಾಡು ಎಂದು ಯಾರೂ ಹೇಳದ ರೀತಿ ಅಭ್ಯಾಸ ಮಾಡಬೇಕು ಎಂದಿದ್ದಾರೆ. ಯಾರಾದರೂ 50 ರನ್‌ ಗಳಿಸಿದರೆ ನೀನು 100 ರನ್‌ ಗಳಿಸುವ ಕಡೆ ಗಮನ ಹರಿಸಬೇಕು ಎಂದು ಸಲಹ ನೀಡಿದ್ದಾರೆ.

ಭಾರತೀಯ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಸದ್ಯ ರಣಜಿ ಟ್ರೋಫಿಯಲ್ಲಿ ಭಾಗವಹಿಸಲು ಪ್ರಾಕ್ಟೀಸ್‌ನಲ್ಲಿ ಮಗ್ನರಾಗಿದ್ದಾರೆ. ದೇಶೀ ಪಂದ್ಯಾವಳಿಯಲ್ಲಿ ವಿರಾಟ್‌ ಕೊಹ್ಲಿ ದೆಹಲಿ ಪರವಾಗಿ ಕಣಕ್ಕಿಳಿಯಲಿದ್ದಾರೆ..  ನಾಳೆಯಿಂದ ನಡೆಯಲಿರುವ ದೆಹಲಿ ಮತ್ತು ರೈಲ್ವೇಸ್ ನಡುವಿನ ಮ್ಯಾಚ್‌ಗಾಗಿ ವಿರಾಟ್ ಕೊಹ್ಲಿ ತಯಾರಿ ಶುರು ಮಾಡಿದ್ದಾರೆ. ಈ ಮಧ್ಯೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ, ತಮ್ಮ ಬಾಲ್ಯ ಸ್ನೇಹಿತ ಮತ್ತು ಅವರ ಮಗನನ್ನ ಭೇಟಿಯಾಗಿ ಕೆಲ ಸಮಯ ಕಾಲ ಕಳೆದಿದ್ದಾರೆ. ವಿರಾಟ್‌ ಕೊಹ್ಲಿ ಅವರ ಬಾಲ್ಯದ ಗೆಳೆಯ ಶಹವೇಜ್ ಮತ್ತು ಅವರ ಮಗ ಕಬೀರ್‌ ಭೇಟಿಯಾಗಿದ್ದಾರೆ.

ಶಹವೇಜ್ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಜೂನಿಯರ್ ಕ್ರಿಕೆಟ್ ಆಡಿದ್ದಾರೆ. ಭೇಟಿಗೆ ಬಂದಿದ್ದ ಶಹವೇಜ್ ಮತ್ತು ಅವರ ಮಗ ಕಬೀರ್ ಜೊತೆ ಕೊಹ್ಲಿ ಮಾತನಾಡಿದ್ದಾರೆ. ಕಬೀರ್‌ಗೆ ಕೊಹ್ಲಿ ನೀಡಿದ ಸಲಹೆ ವೈರಲ್‌ ಆಗುತ್ತಿದೆ.. ಈ ವಿಡಿಯೋದಲ್ಲಿ ಬಾಲಕ ಕಬೀರ್‌ ನಾನು ಟೀಂ ಇಂಡಿಯಾ ಸೇರಬೇಕು ಅಂದ್ರೆ ಏನ್‌ ಮಾಡ್ಬೇಕು ಅಂತಾ ಕೇಳಿದ್ದಾನೆ. ಪುಟಾಣಿಯ ಪ್ರಶ್ನೆಯನ್ನ ತಾಳ್ಮೆಯಿಂದಲೇ ಕೇಳಿದ ಕೊಹ್ಲಿ, ನಿನಗೆ ಪ್ರಾಕ್ಟೀಸ್‌ ಮಾಡು ಎಂದು ಯಾರೂ ಹೇಳದ ರೀತಿ ಅಭ್ಯಾಸ ಮಾಡಬೇಕು ಎಂದಿದ್ದಾರೆ. ಯಾರಾದರೂ 50 ರನ್‌ ಗಳಿಸಿದರೆ ನೀನು 100 ರನ್‌ ಗಳಿಸುವ ಕಡೆ ಗಮನ ಹರಿಸಬೇಕು ಎಂದು ಸಲಹ ನೀಡಿದ್ದಾರೆ.