ವೈರಲ್

"ವಿಶ್ವೇಶ್ವರಯ್ಯ ಓದಿದ ಶಾಲೆ" ಗೆ ವಕ್ಫ್ ವಿವಾದ..!‌

ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್‌ ಸ್ವತ್ತು ಎಂದು ಬದಲಾಹಿಸಿದ್ದು, ಶಾಲೆ ಆವರಣದಲ್ಲೇ ದರ್ಗಾ ತಲೆ ಎತ್ತಿದೆ.

ಚಿಕ್ಕಬಳ್ಳಾಪುರ : ಇತ್ತಿಚಿಗೆ ಕರ್ನಾಟಕದ ಕೆಲವು ಭಾಗಗಳ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದ್ದು, ಇದೀಗ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಯನ್ನೂ ವಕ್ಫ್‌ ಹೆಸರಿಗೆ ಪರಭಾರೆ ಮಾಡಿರುವ ಪ್ರಸಂಗ ಬೆಳಕಿಗೆಬಂದಿದೆ.

ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್‌ ಸ್ವತ್ತು ಎಂದು ಬದಲಾಹಿಸಿದ್ದು, ಶಾಲೆ ಆವರಣದಲ್ಲೇ  ದರ್ಗಾ ತಲೆ ಎತ್ತಿದೆ. 2015-16 ರಲ್ಲಿ ಪಹಣಿಯಲ್ಲಿ ಸ್ಕೂಲು ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಗ್ರಾಮಸ್ಥರು ಶಿಕ್ಷಕರು ನಿರಂತರ ಹೋರಾಟ ನಡೆಸಿದ್ದಾರೆ.