ವೈರಲ್

ಬಾಡಿಗೆಗೆ ಬಾಯ್‌ ಫ್ರೆಂಡ್‌ ಬೇಕಾ? ONLY 389/- ಬೆಂಗಳೂರಿಗೂ ಬಂತ ವಿದೇಶಗಳ ಕರ್ಲ್ಚರ್?

ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ‌ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂದು ಬರೆದಿರುವ ಪೋಸ್ಟರ್​ಗಳು ಕಂಡು ಬಂದಿವೆ. ಈ ಪೋಸ್ಟರ್‌ಗಳಿಗೆ ಜನಾಕ್ರೋಶ ವ್ಯಕ್ತವಾಗಿದ್ದು, ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು: ಇಂದು ಪ್ರೇಮಿಗಳ ದಿನ.. ಈ ದಿನವನ್ನ ವಿಶೇಷವಾಗಿ ಸೆಲೆಬ್ರೇಟ್‌ ಮಾಡೋದಕ್ಕಾಗಿ ಪ್ರೇಮಿಗಳು ತುದಿಗಾಲಿನಲ್ಲಿ ಕಾದಿರುತ್ತಾರೆ. ಆದ್ರೆ, ಈ ಸ್ಪೇಷಲ್‌ ಡೇನಲ್ಲಿ ಕಿಡಿಗೇಡಿಗಳು ಪ್ರೀತಿಯ ಅರ್ಥವನ್ನ ಅನರ್ಥಮಾಡುವಂತಹ ಕೆಲಸವನ್ನ ಮಾಡಿದ್ದಾರೆ.

ಹೌದು.. ಬಾಯ್‌ ಬ್ರೆಂಡ್‌ ಇಲ್ಲದ ಹುಡುಗಿಯರಿಗಾಗಿ ಬಾಯ್‌ ಫ್ರೆಂಡ್‌ ಬಾಡಿಗೆಗೆ ಸಿಗುತ್ತಾನೆ. ಇಂತಹದೊಂದು ಪೋಸ್ಟ್‌ ಈಗ ಬೆಂಗಳೂರಿನ ಗೋಡೆಗಳ ಮೇಲೆ ಕಾಣುತ್ತಿವೆ. ಬೆಂಗಳೂರಿನಲ್ಲಿ ವ್ಯಾಲೆಂಟೈನ್‌ಗೆ ಬಾಯ್ ಫ್ರೆಂಡ್ ಬೇಕಾ? ಎಂದು ಯಾರೋ ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದಾರೆ. ಕೇವಲ 389/- ‌ಕೊಟ್ರೆ ಸಾಕು ಒಂದು ದಿನದ ಪ್ರಿಯತಮ ಸಿಗ್ತಾನೆ. ಹೀಗೆಂದು ಇದೀಗ ಜಯನಗರ ಭಾಗದಲ್ಲಿ ಪೋಸ್ಟರ್ ಅಂಟಿಸಿದ್ದು, ಈ ಪೋಸ್ಟರ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

"RENT A BOY FRIEND ONLY 389/ SCAN ME" ಹೀಗೆಂದು ಪೋಸ್ಟರ್ ಅಂಟಿಸಿದ್ದು, ನಗರದ ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೇಕ್ಸ್ಗಳ ಬಳಿ ‘ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ‌ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂದು ಬರೆದಿರುವ ಪೋಸ್ಟರ್ಗಳು ಕಂಡು ಬಂದಿವೆ. ಈ ಪೋಸ್ಟರ್‌ಗಳಿಗೆ ಜನಾಕ್ರೋಶ ವ್ಯಕ್ತವಾಗಿದ್ದು, ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.