ವಿದೇಶ

ಸತ್ತವರೊಂದಿಗೆ ಮಾತನಾಡಬೇಕಾ? ಹಾಗಾದರೆ ಈ ತಂತ್ರಜ್ಞಾನ ಉಪಯೋಗಿಸಿ..!

ಅಸುನೀಗಿದ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವಿನ್ನು ನೇರವಾಗಿ ಮಾತನಾಡಬಹುದಾದಂತಹ ತಂತ್ರಜ್ಞಾನ ಕಂಡುಹಿಡಿದ ಚೀನಾ.

ಬೀಜಿಂಗ್: ಚೀನಾ ವಿಜ್ಞಾನಿಗಳು ಇಡಿ ಜಗತ್ತಿಗೆ ಅಚ್ಚರಿ ಮೂಡಿಸುವ ತಂತ್ರಜ್ಞಾನವೊಂದನ್ನ ಕಂಡುಹಿಡಿದಿದ್ದಾರೆ. ಸತ್ತು ಹೋದ ನಮ್ಮ ಆತ್ಮೀಯರನ್ನು ಮಾತನಾಡಿಸಲು ಎಲ್ಲೂ ಹೋಗಬೇಕಿಲ್ಲ. ಅವರನ್ನು ಭೂಮಿಗೇ ಕರೆಯಿಸಬಹುದು ಎಂದು ಹೇಳುತ್ತಿದ್ದಾರೆ! ಅದು ಹೇಗೆ ?ಅದ್ಯಾವ ತಂತ್ರಜ್ಞಾನ ಎಂಬ ಮಾಹಿತಿ ಇಲ್ಲಿದೆ.

ಅದ್ಯಾವ ತಂತ್ರಜ್ಞಾನ?
ಚೀನಾ ವಿಜ್ಞಾನಿಗಳು ಕಂಡುಹಿಡಿದಿರುವುದು  ‘ಎಐ ಡೆಡ್ ಬಾಟ್’ . ಅಂದರೆ, ಇದು ಡಿಜಿಟಲ್ ತಂತ್ರಜ್ಞಾನ ಆಧಾರಿತವಾದ ಆರ್ಟಿಫಿಷಿಯನ್ ಇಂಟಲಿಜೆನ್ಸ್ ನಿಂದ ಕಾರ್ಯನಿರ್ವಹಿಸುವ ತಂತ್ರಜ್ಞಾನ. ಈ ತಂತ್ರಜ್ಞಾನದಲ್ಲಿ ನೀವು ನಿಮ್ಮ ಆತ್ಮೀಯರ ಫೋಟೋಗಳು, ವಿಡಿಯೋಗಳು, ಆಡಿಯೋ ಕ್ಲಿಪ್ ಗಳೇನಾದರೂ ಇದ್ದರೆ ಅವುಗಳನ್ನು ಹಾಗೂ ತಮ್ಮ ಕುಟುಂಬಸ್ಥರ, ಸಂಬಂಧಿಕರ ಪರಿಚಯವನ್ನು ಈ ಐಎ ಡೆಡ್ ಬಾಟ್ ಗೆ ಫೀಡ್ ಮಾಡಬಹುದು.
ಆ ಎಲ್ಲಾ ಫೋಟೋಗಳು, ವಿಡಿಯೋಗಳು, ಆಡಿಯೋ ಕ್ಲಿಪ್ ಹಾಗೂ ನಲ್ಲಿರುವ ಧ್ವನಿಯನ್ನು ವಿವಿಧ ಆಯಾಮಾಗಳಲ್ಲಿ ಅವಲೋಕಿಸುವ ಎಐ ಡೆಡ್ ಬಾಟ್, ಥೇಟ್ ಅದೇ ವ್ಯಕ್ತಿಯನ್ನು ಹೋಲುವಂಥ ಪ್ರತಿಕ್ರಿಯೆಯನ್ನು ನೀಡುವಂಥ ಸಾಮರ್ಥ್ಯವನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತದೆ. ಈ ತಂತ್ರಜ್ಞಾನವನ್ನು ಇದಕ್ಕಾಗಿ ತಯಾರಿಸಲಾದ ಎಲೆಕ್ಟ್ರಾನಿಕ್ ಪರಿಕರದಲ್ಲಿ ಅಳವಡಿಸಿದರೆ, ನಾವು ಮನೆಗಳಲ್ಲಿ ಅಲೆಕ್ಸಾ ಎಂಬ ಎಐ ಆಧಾರಿತ ಯಂತ್ರವನ್ನು ಬಳಸುತ್ತೇವ ರೀತಿಯಲ್ಲೇ ನಾವು ನಮ್ಮಿಂದ ದೂರವಾದವರೊಂದಿಗೆ ಮಾತನಾಡಬಹುದು! ನಾವು ಕೇಳುವ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆಯಬಹುದು, ಹರಟೆ ಹೊಡೆಯಬಹುದು ಅಥವಾ ಜೀವನದ ಸಮಸ್ಯೆಗಳಿಗೆ ಅವರ ಸಲಹೆಯನ್ನೂ ಕೇಳಬಹುದು.