ಕರ್ನಾಟಕ

ಕರ್ನಾಟಕದಲ್ಲಿ ವಕ್ಫ್ ಕಾಯ್ದೆ ದುರುಪಯೋಗ ಆಗ್ತಿದೆ: ಅಭಯ್ ಪಾಟೀಲ್

ಇಡೀ ಬೆಳಗಾವಿ ಆಸ್ತಿ ವಕ್ಫ್ ಮಾಡುವ ಹುನ್ನಾರ ನಡೆದಿದೆ. ಸರ್ಕಾರವೇ ಭೂ ಮಾಫಿಯಾ ವರ್ತನೆ ಮಾಡುವ ಕೆಲಸ ಮಾಡ್ತಿದೆ.

ಬೆಳಗಾವಿ: ಸದ್ಯ ರಾಜ್ಯ ರಾಜಕೀಯದಲ್ಲಿ ವಕ್ಫ್ ಕಾಯ್ದೆಯ ಕುರಿತು ಬಾರಿ ಚರ್ಚೆ ಉಂಟಾಗುತ್ತಿದೆ. ಈ ಕುರಿತು  ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸುದ್ಧಿಗೋಷ್ಠಿ ನಡೆಸಿದ್ದಾರೆ. 

ಜಮೀರ್ ಅಹ್ಮದ್ ಮಂತ್ರಿ ಆದ ಮೇಲೆ ಜಾಸ್ತಿ ಆಗಿದೆ.ಮಠ ಮಂದಿರ, ದೇವಾಲಯ, ‌ಜಮೀನು, ಆಸ್ತಿ ವಕ್ಫ್ ಅಂತಾ ಮಾಡಿ ನೋಟಿಸ್.ಜಮೀರ್ ಅಹ್ಮದ್ ರಾಜ್ಯಾದ್ಯಂತ ಓಡಾಡಿ ಇಲಾಖೆ ಕೆಲಸ ಮಾಡ್ತಿಲ್ಲ.ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ವಕ್ಫ್ ಆಸ್ತಿ ಮಾಡಿಸುವ ಕೆಲಸ ಮಾಡ್ತಿದ್ದಾರೆ.ಆನಂದವಾಡಿ, ಮುಚ್ಚಂಡಿ ಸೇರಿ ಹಲವು ಕಡೆ 250 ಎಕರೆ ಆಸ್ತಿಗೆ ವಕ್ಫ್ ಸೇರಿಸಿದ್ದಾರೆ.ಇದು ಒಂದು ಭೂಮಾಫಿಯಾ ಎಂದಿದ್ದಾರೆ ಶಾಸಕ ಅಭಯ್ ಪಾಟೀಲ್. ಇಡೀ ಬೆಳಗಾವಿ ಆಸ್ತಿ ವಕ್ಫ್ ಮಾಡುವ ಹುನ್ನಾರ ನಡೆದಿದೆ. ಸರ್ಕಾರವೇ ಭೂ ಮಾಫಿಯಾ ವರ್ತನೆ ಮಾಡುವ ಕೆಲಸ ಮಾಡ್ತಿದೆ. ವಕ್ಫ್ ಬೋರ್ಡ್ ರದ್ದು ಮಾಡಬೇಕು ಇಲ್ಲವಾದ್ರೇ ಎಸ್ಸಿ, ಎಸ್ಟಿ ಅವರಿಗೆ ಜಮೀನು ಹಂಚಿಕೆ ಮಾಡಲಿ ಎಂದು ವಾಗ್ದಾಳಿ ನೆಡೆಸಿದ್ದಾರೆ.