ಕರ್ನಾಟಕ

ಬಿಜೆಪಿ ಅತೃಪ್ತರ ವಕ್ಫ್ ಹೋರಾಟಕ್ಕೆ ಆರಂಭದಲ್ಲೇ ವಿಘ್ನ..!

ಅತೃಪ್ತ ನಾಯಕ ಯತ್ನಾಳ್ ಅಂಡ್ ಟೀಂಗೆ ಸಪೋರ್ಟ್​ ಮಾಡಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದಾರೆ.

ವಕ್ಫ್ ವಿವಾದ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ರೆಬೆಲ್ ನಾಯಕರ ವಕ್ಫ್ ಹೋರಾಟಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಅತೃಪ್ತ ನಾಯಕ  ಯತ್ನಾಳ್ ಅಂಡ್ ಟೀಂಗೆ ಸಪೋರ್ಟ್ ಮಾಡಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದಾರೆ. ಇಂದಿನಿಂದ ಯತ್ನಾಳ್ ಅಂಡ್ ಟೀಂನ ಮೊದಲ ದಿನದ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ಆದರೆ ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಬೀದರ್ ಶಾಸಕ ದೂರ ಉಳಿದ್ರು. ಯತ್ನಾಳ್ ಅಂಡ್ ಟೀಂಗೆ ಅಪ್ಪ-ಅಮ್ಮ ಇಲ್ಲ, ಅನಾಥವಾಗಿದೆ ಎಂದು ದೂಡಿದ್ದಾರೆ. ಮುಂದಿನ ದಿನಗಳಲ್ಲೂ ಯತ್ನಾಳ್ ಟೀಂಗೆ ಬೆಂಬಲ ಸಿಗುವುದು ಡೌಟ್ ಎನ್ನಲಾಗುತ್ತಿದೆ.