ಕರ್ನಾಟಕ

ಮಾಜಿ-ಹಾಲಿ ಶಾಸಕರ ನಡುವೆ ಮಾತಿನ ವಾಕ್ಸಮರ..!

ನಿನ್ ಪುರಾಣ ಪುಣ್ಯಕಥೆಗಳನ್ನು ಎಲ್ಲಾ ಗೆಸ್ಟ್ ಹೌಸ್ ಗಳು ಹೇಳ್ತಿವೆ ಎಂದು ಶಾಸಕರ ವ್ಯಂಗ್ಯವಾಗಿ ಮಾತನಾಡಿದ್ದು, ಇತ್ತ ಮಾಜಿ ಜೆಡಿಎಸ್ ಶಾಸಕ ಅನ್ನದಾನಿ ತಾನು ಯಾವುದೇ ಆ ತರಹದ ಅನೈತಿಕ ಚಟುವಟಿಕೆ ನಡೆಸಿಲ್ಲ. ಈ ಬಗ್ಗೆ ಸಾಕ್ಷಿ ಕೊಟ್ಟರೆ ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಇಲ್ಲದಿದ್ದರೆ ಅವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಮಂಡ್ಯ : ಮಾಜಿ-ಹಾಲಿ ಶಾಸಕರ ನಡುವೆ ಮಾತಿನ ವಾಕ್ಸಮರ ಶುರುವಾಗಿದ್ದು, ಮಳವಳ್ಳಿ ಕ್ಷೇತ್ರದಲ್ಲಿ ಹಾಲಿ-ಮಾಜಿ ಶಾಸಕರ ನಡುವೆ ಐಬಿ ಜಟಾಪಟಿ ನಡೆದಿದೆ. ಜೆಡಿಎಸ್ ಮಾಜಿ ಶಾಸಕರ ವಿರುದ್ಧ ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಶಾಸಕರಾಗಿದ್ದಾಗ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರವನ್ನು ಅನ್ನದಾನಿ ಅನೈತಿಕ ಚಟುವಟಿಕೆಗೆ ಬಳಸಿಕೊಂಡಿರೋ ಆರೋಪ ಮಾಡಿದ್ದಾರೆ.

ನಿನ್ ಪುರಾಣ ಪುಣ್ಯಕಥೆಗಳನ್ನು ಎಲ್ಲಾ ಗೆಸ್ಟ್ ಹೌಸ್ ಗಳು ಹೇಳ್ತಿವೆ ಎಂದು ಶಾಸಕರ ವ್ಯಂಗ್ಯವಾಗಿ ಮಾತನಾಡಿದ್ದು, ಇತ್ತ ಮಾಜಿ ಜೆಡಿಎಸ್ ಶಾಸಕ ಅನ್ನದಾನಿ ತಾನು ಯಾವುದೇ ಆ ತರಹದ ಅನೈತಿಕ ಚಟುವಟಿಕೆ ನಡೆಸಿಲ್ಲ. ಈ ಬಗ್ಗೆ ಸಾಕ್ಷಿ ಕೊಟ್ಟರೆ ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಣೆ  ಮಾಡಿದ್ದಾರೆ. ಇಲ್ಲದಿದ್ದರೆ ಅವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಇಬ್ಬರ ನಡುವೆ ಕ್ಷೇತ್ರದಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ಕಿತ್ತಾಟದ ಜಟಾಪಟಿಯಲ್ಲಿ  ಇಬ್ಬರಿಂದಲೂ  ಮಾತಿನ‌ ಹಿಡಿತ‌ ಮೀರಿದೆ.