ಕರ್ನಾಟಕ

ಜೆಡಿಎಸ್‌ ನಾಯಕರ ನಡುವೆ ಮಾತಿನ ಚಕಮಕಿ!

ರೇವಣ್ಣ - ಜಿ.ಟಿ.ದೇವೇಗೌಡ ನಡುವೆ ವಾಗ್ವಾದ

ಮೈಸೂರು - ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ , ನಾನು - ನನ್ನ ಮಗ ಜೈಲಿಗೆ ಹೋಗುವಂತ ತಪ್ಪು ಏನು ಮಾಡಿಲ್ಲ. ಇನ್ನೂ ,೨೦೨೦ ರ ವೇಳೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗುವ ಸಾಧ್ಯತೆ ಇತ್ತು. ಆಗ ದೇವೇಗೌಡರ ಜೊತೆ ಮಾತನಾಡಿ ತಪ್ಪಿಸಿದಕ್ಕೆ ಇವರೇ ಕ್ಷಮೆ ಕೇಳಬೇಕಿದೆ. ಈಗ ನಮ್ಮ ಬಗ್ಗೆ ಅಂತಹ ಯಾವುದೇ ಆರೋಪ ಇಲ್ಲದಿದ್ದರೆ ಜೈಲಿಗೆ ಹೋಗುವುದು ತಪ್ಪಿಸಿದ್ದಾರೆ ಎಂದು ಯಾರಿಗೆ ಹೇಳಿದ್ದಾರೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣ ಸೇರಿದಂತೆ ೩ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ಜೆಡಿಎಸ್‌ ನಾಯಕರು ವಾಗ್ವಾದ ಮುಂದುವರೆಸಿದ್ದಾರೆ. ಇತ್ತಿಚೆಗೆ ಎಚ್‌.ಡಿ.ರೇವಣ್ಣ ಮಾತನಾಡಿ , ಕುಮಾರಸ್ವಾಮಿ ಪೊಲೀಸರಿಗೆ ಬಂಧನ ಮಾಡದಂತೆ ಹೇಳಿದ್ರು , ಇದನ್ನ ಮರೆಯಬಾರದೆಂದು ಹೆಸರು ಹೇಳದೇ ನಾಯಕರಿಗೆ ಹೇಳಿದ್ರು. ಆದರೆ , ಇದನ್ನ ತೀರಾ ಸೂಕ್ಷ್ಮವಾಗಿ ಪರಿಗಣಿಸಿರುವ ಜಿ.ಟಿ.ದೇವೇಗೌಡ ಇಂದು ವಾಗ್ದಾಳಿ ಮಾಡಿದ್ದಾರೆ.