ವಿಜಯಪುರದಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನ ಪ್ರತಿಭಟನೆಗೆ ಕರೆ ನೀಡಿರುವ, ಶಾಸಕ ಯತ್ನಾಳ್ ಗೆ ಸಿಡಿ ಶಾಕ್ ಎದುರಾಗಿದೆ. ವಕ್ಫ್ ವಿರುದ್ಧದ ಪ್ರತಿಭಟನೆಗೆ ಕರೆ ನೀಡಿದ್ದಕ್ಕೆ, ಆಕ್ರೋಶಗೊಂಡ ಮುಸ್ಲಿಂ ಮುಖಂಡ ಎಸ್.ಎಸ್ ಖಾದ್ರಿ ಯತ್ನಾಳ್ ಗೆ ವಾರ್ನಿಂಗ್ ಮಾಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿ* ಮುಚ್ಕೊಂಡು ರಾಜಕಾರಣ ಮಾಡಬೇಕು. ಇಲ್ಲದಿದ್ದರೆ ನವೆಂಬರ್ 6ಕ್ಕೆ ಸಿಡಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಕಾರ್ಪೊರೇಟರ್, ಇದು ಬ್ಲಾಕ್ ಮೇಲ್ ಅಲ್ಲ. ಯತ್ನಾಳ್ ಅವ್ರು ಕೋರ್ಟ್ ನಿಂದ ಮಾನಹಾನಿ ವರದಿ ಪ್ರಸಾರ ಮಾಡದಂತೆ ಸ್ಟೇ ತಂದಿದ್ದಾರೆ. ಇದಕ್ಕೆ ವ್ಯಂಗ್ಯವಾಗಿ ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ.