ವೈರಲ್

ಕ್ಷುಲ್ಲಕ ಕಾರಣಕ್ಕೆ ವಾಟರ್ ಮೆನ್ ಕೊಲೆ: ಆರೋಪಿ ಕಾಲಿಗೆ ಗುಂಡೇಟು

ಮಧು ಎಂಬುವನು ಕ್ಷುಲ್ಲಕ ಕಾರಣಕ್ಕೆ ವಾಟರ್ ಮೆನ್ ಗಣೇಶ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಇದೇ ವೇಳೆ ಮಧು ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದರಿಂದ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಹಾಸನ : ರೌಡಿ ಶೀಟರ್ ಓರ್ವ ಮಧು ಎಂಬುವನು ಕ್ಷುಲ್ಲಕ ಕಾರಣಕ್ಕೆ ವಾಟರ್ ಮೆನ್ ಗಣೇಶ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಇದೇ ವೇಳೆ ಮಧು ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದರಿಂದ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

टर्कीका राजदूतको गाडीमा गोली प्रहार - जनतापाटी :: Janatapati: Quick &  Reliable Online News Portal in Nepal

ಈ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ರೌಡಿ ಶೀಟರ್ ಮಧು ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸೆ.14ರಂದು ಮಧು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವಾಟರ್ ಮೆನ್ ಗಣೇಶ್ ನನ್ನು ಕೊಲೆ ಮಾಡಿದ್ದ. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇಂದು ಹಬ್ಬ ಹಿನ್ನೆಲೆ ಅರೇಹಳ್ಳಿಗೆ ಮಧು ಬಂದಿದ್ದ. ಖಚಿತ ಮಾಹಿತಿ ಪಡೆದು ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಮಧು ಡ್ರ್ಯಾಗನ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಶರಣಾಗುವಂತೆ ಹೇಳಿದರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಕ್ಷಣ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿಂದೆ.