ಕರ್ನಾಟಕ

ವಿಜಯೇಂದ್ರ ಚಡ್ಡಿ ಹಾಕೋ ಮುಂಚೆಯಿಂದ ಪಕ್ಷದಲ್ಲಿದ್ದೇವೆ : ಯತ್ನಾಳ್‌

ರಾಜ್ಯ ಬಿಜೆಪಿ ಅಧ್ಯಕ್ಷ ಚುನಾವಣೆಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಅಂತ ಇನ್ನೂ ನಿರ್ಧಾರ ಮಾಡಿಲ್ಲ, ನಾಳೆ ಸಭೆಯಲ್ಲಿ ಏನು ಚರ್ಚೆ ಮಾಡಬೇಕೋ ಮಾಡ್ತೀವಿ, ಪಕ್ಷದೊಳಗಿನ ಸರ್ವಾಧಿಕಾರ ಪತನ ಆಗಲೇಬೇಕು..ವಿಜಯೇಂದ್ರಗೆ ದುರಹಂಕಾರ ಇದೆ, ದುಡ್ಡು ಮಾತಾಡಿಸ್ತಾ ಇದೆ ಎಂದು ಕಿಡಿಕಾರಿದ್ದಾರೆ.

ಬಿ.ವೈ. ವಿಜಯೇಂದ್ರ ಚಡ್ಡಿ ಹಾಕೋ ಮುಂಚೆಯಿಂದ ಪಕ್ಷದಲ್ಲಿದ್ದೇವೆ, ಪಾರ್ಟಿಯಿಂದ ನಮ್ಮನ್ನ ಹೊರಗೆ ಹಾಕ್ತೀರಾ..? ನಾವೂ ರೆಡಿ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಮತ್ತೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ. ಅಪ್ಪ, ಮಗ ಮತ್ತೊಬ್ಬ ಮಗ ನೀವೇ ಎಲ್ಲರೂ ಪಕ್ಷದಲ್ಲಿದ್ದು ಬಿಡಿ, ಜಿಲ್ಲಾಧ್ಯಕ್ಷರ ನೇಮಕ ಹೇಗೆ ಆಗಿದೆ ಎಲ್ಲಾ ವಿಚಾರ ಗೊತ್ತಿದೆ, ಈ ಬಚ್ಚಾಯಿಂದ ನಾವು ಕಲೀಬೇಕಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಬಿಜೆಪಿಯ ಈ ಅಧ್ಯಕ್ಷನನ್ನ ಅಂತೂ ಒಪ್ಪಲು ಸಾಧ್ಯವಿಲ್ಲ, ನಾವು ಯಾರೂ ಸುತಾರಾಂ ಒಪ್ಪಲ್ಲ ಅಂತಾ ಶಾಸಕ ಯತ್ನಾಳ್‌ ಗುಡುಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಚುನಾವಣೆಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಅಂತ ಇನ್ನೂ ನಿರ್ಧಾರ ಮಾಡಿಲ್ಲ, ನಾಳೆ ಸಭೆಯಲ್ಲಿ ಏನು ಚರ್ಚೆ ಮಾಡಬೇಕೋ ಮಾಡ್ತೀವಿ, ಪಕ್ಷದೊಳಗಿನ ಸರ್ವಾಧಿಕಾರ ಪತನ ಆಗಲೇಬೇಕು..ವಿಜಯೇಂದ್ರಗೆ ದುರಹಂಕಾರ ಇದೆ, ದುಡ್ಡು ಮಾತಾಡಿಸ್ತಾ ಇದೆ ಎಂದು ಕಿಡಿಕಾರಿದ್ದಾರೆ.