ಕರ್ನಾಟಕ

ʼಒನ್ ನೇಷನ್ ಒನ್ ಎಲೆಕ್ಷನ್‌ಗೆ ನಮ್ಮ ವಿರೋಧವಿಲ್ಲʼ.. ಆದ್ರೆ ಪಕ್ಷದ ನಿಲುವಿಗೆ ನಾನು ಬದ್ದ!

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಒನ್ ನೇಷನ್ ಒನ್ ಎಲೆಕ್ಷನ್‌ಗೆ ನಮ್ಮ ವಿರೋಧವಿಲ್ಲ ಆದ್ರೆ ಪಕ್ಷದ ನಿಲುವಿಗೆ ನಾನು ಬದ್ದ ಎಂದಿದ್ದಾರೆ.

ಮಂಡ್ಯ: ದೇಶದಾದ್ಯಂತ ಒನ್ ನೇಷನ್ ಒನ್ ಎಲೆಕ್ಷನ್ ಭಾರೀ ಚರ್ಚೆ ಆಗ್ತಿದೆ. ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಒನ್ ನೇಷನ್ ಒನ್ ಎಲೆಕ್ಷನ್‌ಗೆ ನಮ್ಮ ವಿರೋಧವಿಲ್ಲ ಆದ್ರೆ ಪಕ್ಷದ ನಿಲುವಿಗೆ ನಾನು ಬದ್ದ ಎಂದಿದ್ದಾರೆ.

ಈ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ಈ ವಿಚಾರವನ್ನು ಅಸೆಂಬ್ಲಿಯಲ್ಲಿ ಮಂಡಿಸಬೇಕು. ಒನ್ ನೇಷನ್ ಒನ್ ಎಲೆಕ್ಷನ್ ಅಂದ್ರೆ ಸಾಕಷ್ಟು ವಿಚಾರಗಳು ಬರುತ್ತವೆ. ಎಲೆಕ್ಷನ್ ಮುಗಿದ ಮೇಲೆ ಮಧ್ಯ ಚುನಾವಣೆ ಬಂದ್ರೆ ಏನು ಮಾಡಬೇಕು ಅನ್ನೋದು ನೋಡಬೇಕು. ಲೋಕಲ್ ಬಾಡಿ, ಕೋ-ಆಪರೇಟಿವ್ ಎಲೆಕ್ಷನ್ ಎಲ್ಲಾ ಇರುತ್ತೆ. ಸಾಕಷ್ಟು ವಿಚಾರಗಳು ಇವೆ, ಎಲ್ಲಾ ಚರ್ಚೆ ಮಾಡಬೇಕು.ಪಾರ್ಲಿಮೆಂಟ್‌ನಲ್ಲಿ ವಿರೋಧ ಪಕ್ಷವು ಸಹ ಸ್ಟ್ರಾಂಗ್ ಇದೆ. ನಾವು ಇದಕ್ಕೆ ವಿರೋಧ ಅಂತಾ ಅಲ್ಲ. ನಮ್ಮ ಪಕ್ಷದ ನಿಲುವಿಗೆ ನಾವು ಬದ್ಧವಾಗಿರುತ್ತೇವೆ ಎಂದರು.