ಮಂಡ್ಯ : ನಿಖಿಲ್ ಚುನಾವಣಾ ಪ್ರಚಾರದ ವೇಳೆ ಕಣ್ಣೀರು ವಿಚಾರಕ್ಕೆ ಸಂಬಂಧಪಟ್ಟಂತೆ, ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ನಿಖಿಲ್ ಮಾತಿಗೆ ಯಾಕೆ ಅಡ್ಡಿ ಬರುವುದು. ಎರಡು ಬಾರಿ ಸೋತಿದ್ದಾನೆ. ನೋವಿರುತ್ತದೆ.

ಕುಮಾರಸ್ವಾಮಿ ಅವರಿಂದ ಯೋಗೇಶ್ವರ್ ಗೆ ಎರಡು ಬಾರಿ ಅನ್ಯಾಯವಾಗಿದೆ. ಎರಡು ಬಾರಿ ಯೋಗೇಶ್ವರ್ ಸೋತಿದ್ದಾರೆ. ಅವರಿಗೂ ನೋವಾಗಿದೆ. ನಿಖಿಲ್ ಮೇಲೆ ನಮಗೆ ಅನುಕಂಪವಿಲ್ಲ, ದ್ವೇಷನೂ ಇಲ್ಲ, ಪ್ರೀತಿ ಇದೆ. ನಿಖಿಲ್ ಕೂಡ ಮಗನಿದ್ದಂತೆ ಎಂದರು.