ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎನ್ನುವ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿರುವ ಅಹಿಂದ ಮುಖಂಡರು, ನಮ್ಮ ತಟ್ಟೆಗೆ ಕೈ ಹಾಕಬೇಡಿ, ಮುಂದುವರೆದರೆ ಕೈಯನ್ನೇ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ , ನಾವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೇಳಿಯೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
2ಎ ಪ್ರಸ್ತಾವನೆ ಮಾಡಿದ್ದು ಆಗ ಕಾಂಗ್ರೆಸ್ ನ ಮಾಜಿ ಶಾಸಕ, ಈಗ ಹಾಲಿ ಶಾಸಕ. ನಾವು ಮೊದಲಿನಿಂದಲೂ 2ಎ ಬೇಡಾ ಅದರಲ್ಲಿ 104 ಜಾತಿಗಳಿವೆ. ಅವರ ಹಕ್ಕನ್ನು ಕಸಿದುಕೊಳ್ಳಲು ನಾವು ತಯಾರಿಲ್ಲ. ನಾವು, ನರೇಂದ್ರ ಮೋದಿ, ಅಮಿತ್ ಷಾ,ನಡ್ಡಾ ಶೋಭಾ ಕರಂದ್ಲಾಜೆ ಬೊಮ್ಮಾಯಿ ಸೇರಿ ಒಂದು ಸೂತ್ರ ಕಂಡು ಹಿಡಿದಿವಿ ಅದರಂತೆ ಮಾಡಿದ್ರೆ ಸಾಕು ಎಂದು ಹೇಳಿದ್ದಾರೆ.