ಕರ್ನಾಟಕ

ನಮ್ಮ ಹೋರಾಟ ತಡೆಯಲು ಯಾವ ನಿಷೇಧಾಜ್ಞೆ ಹಾಕಿದ್ರೂ ಆಗಲ್ಲ : ವಿಜಯೇಂದ್ರ

ಪೊಲೀಸ್ ಠಾಣೆಗೇ ಕಲ್ಲೆಸೆಯುವ, ಪೊಲೀಸರನ್ನೇ ಎದುರಿಸುವ ಮಟ್ಟಕ್ಕೆ ಹೋಗಿದ್ದಾರೆ ಆಂದ್ರೆ ಪೊಲೀಸ್ ಇಲಾಖೆ, ಸರ್ಕಾರ ಅಸಹಾಯಕವಾಗಿದೆ. ಅನಿವಾರ್ಯವಾಗಿ ಹಿಂದೂಗಳ ರಕ್ಷಣೆಗೆ ನಾವು ನಿಲ್ಲಬೇಕಿದೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದರು.

ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿಕೆಗೆ ವಿಜಯೇಂದ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ,  ಸರ್ಕಾರಕ್ಕೆ ತಾಕತ್, ಯೋಗ್ಯತೆ ಇದ್ದಿದ್ರೆ ಆವತ್ತು ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು. ಇವತ್ತು ಹಿಂದೂ ಕಾರ್ಯಕರ್ತರು ಹೋರಾಟ ಮಾಡ್ತೀವಿ ಅಂತಾ ನಿಷೇಧಾಜ್ಞೆ ಹೇರೋದಲ್ಲ. ಯಾಕೆ ಆವತ್ತು ಸರ್ಕಾರ, ಗೃಹ ಇಲಾಖೆ ಸತ್ ಹೋಗಿತ್ತಾ ಎಂದು ಕಟುವಾಗಿ ಟೀಕಿಸಿದ್ದಾರೆ.

ಏನೇ ಆದರೂ ನಾವು ಹೋರಾಟ ಮಾಡ್ತೇವೆ, ನಮ್ಮ ಹೋರಾಟ ತಡೆಯಲು ಯಾವ ನಿಷೇಧಾಜ್ಞೆ ಹಾಕಿದ್ರೂ ಆಗಲ್ಲ. ಇವತ್ತು ಎಲ್ಲ ಹಿಂದೂಪರ ಸಂಘಟನೆಗಳು ಭಾಗವಹಿಸ್ತಿದ್ದಾರೆ. ಅಟ್ಟಹಾಸದ ಆಡಳಿತ ರಾಜ್ಯದಲ್ಲಿ ಮರುಕಳಿಸುತ್ತಿದೆ ಅನಿಸ್ತಿದೆ. ಪೊಲೀಸ್ ಠಾಣೆಗೇ ಕಲ್ಲೆಸೆಯುವ, ಪೊಲೀಸರನ್ನೇ ಎದುರಿಸುವ ಮಟ್ಟಕ್ಕೆ ಹೋಗಿದ್ದಾರೆ ಆಂದ್ರೆ ಪೊಲೀಸ್ ಇಲಾಖೆ, ಸರ್ಕಾರ ಅಸಹಾಯಕವಾಗಿದೆ. ಅನಿವಾರ್ಯವಾಗಿ ಹಿಂದೂಗಳ ರಕ್ಷಣೆಗೆ ನಾವು ನಿಲ್ಲಬೇಕಿದೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದರು.