ಕರ್ನಾಟಕ

ಕಾಂಗ್ರೆಸ್‌ ಸರ್ಕಾರದಿಂದ ದ್ವೇಷದ ರಾಜಕಾರಣ - R. ಅಶೋಕ್‌

ಮುಡಾ, ವಾಲ್ಮೀಕಿ ಹಗರಣ ಬಯಲಿಗೆ ಬರ್ತಿದ್ದಂತೆ ಬಿ.ಎಸ್‌. ಯಡಿಯೂರಪ್ಪಗೆ ಸಂಬಂಧಿಸಿದ ಕೇಸ್‌ ರೀ ಓಪನ್‌ಗೆ ಮುಂದಾಗಿದ್ದಾರೆ ಅಂತಾ ಕಿಡಿಕಾರಿದ್ದಾರೆ..

ಭ್ರಷ್ಟಾಚಾರ ಕೇಸಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ಶಿಫಾರಸು ಮಾಡಿರೋದಕ್ಕೆ ವಿಪಕ್ಷ ನಾಯಕ ಆರ್.‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್‌, ಬಿ.ಎಸ್‌. ಯಡಿಯೂರಪ್ಪ ಮೇಲಿನ ಪ್ರಕರಣವನ್ನ ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ.. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆದ್ರೂ ಈ ಕೇಸ್‌ ನೆನಪಿಗೆ ಬಂದಿರಲಿಲ್ಲ.. ಮುಡಾ, ವಾಲ್ಮೀಕಿ ಹಗರಣ ಬಯಲಿಗೆ ಬರ್ತಿದ್ದಂತೆ ಬಿ.ಎಸ್‌. ಯಡಿಯೂರಪ್ಪಗೆ ಸಂಬಂಧಿಸಿದ ಕೇಸ್‌ ರೀ ಓಪನ್‌ಗೆ ಮುಂದಾಗಿದ್ದಾರೆ ಅಂತಾ ಕಿಡಿಕಾರಿದ್ದಾರೆ.. ರಾಜ್ಯಪಾಲರು ರಿಜೆಕ್ಟ್ ಮಾಡಿದ್ದ ಕೇಸ್‌ನ ರೀಓಪನ್‌ಗೆ ಮುಂದಾಗಿದ್ದಾರೆ ಅಂದ್ರೆ ಇದು ರಾಜಕೀಯ ದ್ವೇಷ ಅಂತಾ ಆರೋಪಿಸಿದ್ದಾರೆ.. ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲಿದ್ದಾಗ ಬಿಎಸ್‌ವೈ ಪ್ರಕರಣವನ್ನ ರಾಜ್ಯಪಾಲರು ತಿರಸ್ಕರಿಸಿದಾಗ ಯಾಕೆ ಕೋರ್ಟ್‌ಗೆ ಹೋಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.. ಸರ್ಕಾರದ ನಿರ್ಧಾರದ ವಿರುದ್ಧ ನಾವು ಕಾನೂನು ಮೂಲಕ ಹೋರಾಟ ಮಾಡ್ತೀವಿ ಎಂದಿದ್ದಾರೆ..