ವೈರಲ್

ರಾತ್ರಿಯಾದ್ರೆ ಸಾಕು ಶುರುವಾಗುತ್ತೆ ವಿಕೃತ ಕಾಮಿಯ ಕಾಟ; ಮಹಿಳೆಯ ಚಪ್ಪಲಿ ಜೊತೆ ವಿಚಿತ್ರ ವರ್ತನೆ..!

ರಾತ್ರಿ ಹೊತ್ತು ಅರೆಬೆತ್ತಲೆಯಾಗಿ ಓಡಾಡುವ ವ್ಯಕ್ತಿ ಮನೆ ಮುಂದೆ ಬಂದು ಮಹಿಳೆಯರ ಚಪ್ಪಲಿಯನ್ನ ತೆಗೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಾನೆ

ಹಾಸನ: ವಿಕೃತ ಕಾಮಿಯ ವಿಚಿತ್ರ ವರ್ತನೆಗೆ ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಜನ ಕಂಗೆಟ್ಟಿದ್ದಾರೆ.

ರಾತ್ರಿಯಾದರೆ ಸಾಕು ಅರೆಬೆತ್ತಲೆಯಾಗಿ ಓಡಾಡುವ ವ್ಯಕ್ತಿ ಮನೆ ಮುಂದೆ ಬಂದು ಮಹಿಳೆಯರ ಚಪ್ಪಲಿಯನ್ನ ತೆಗೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಾನೆ. ನಂತರ ಮನೆಯ ಸುತ್ತಾಲು ಓಡಾಡುತ್ತಾ  ಸ್ಥಳೀಯರಿಗೆ ಭಯ ಹುಟ್ಟಿಸುತ್ತಿದ್ದಾನೆ.

ಪ್ರತಿಷ್ಠಿತ ಬಡಾವಣೆಗಳನ್ನೇ ಟಾರ್ಗೆಟ್ ಮಾಡುವ ಈತ ಮನೆಯ ಮುಂದೆ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ್ದಾನೆ. ಆತನ ದುರ್ವರ್ತನೆ ಬಡಾವಣೆಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ. ಆದಷ್ಟು ಬೇಗ ಈತನನ್ನ ಬಂಧಿಸಿ, ವಿಕೃತ ಕಾಮಿಯ ಕಾಟದಿಂದ ಮುಕ್ತ ನೀಡಿ ಎಂದು ಪೊಲೀಸರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.