ಸ್ಪೆಷಲ್ ಸ್ಟೋರಿ

ಮನಸ್ಸಿನ ನಿಯಂತ್ರಣದ ಕುರಿತು ಮಹಾಜ್ಞಾನಿ ಕೃಷ್ಣ ಹೇಳಿದ್ದೇನು?

ಅರ್ಜುನನ ಪ್ರಶ್ನೇ ಎಷ್ಟು ಸೂಕ್ಮವಾಗಿದೇಯೊ ಅಷ್ಟೇ ಸಮಂಜಸವಾಗಿದೆ ಶ್ರೀಕೃಷ್ಣನ ಉತ್ತರ.

ಒಮ್ಮೆ ಅರ್ಜುನನಿಗೆ ಮನಸ್ಸನ್ನ ನಿಯಂತ್ರಿಸುವುದು ಬಹಳ ಕಷ್ಟವೆನಿಸುತ್ತದೆ. ಆಗ ಶ್ರೀಕೃಷ್ಣನ ಬಳಿ ಬಂದು ಕೃಷ್ಣ ಈ ಮನಸ್ಸು ಸದಾ ಚಂಚಲವಾಗಿರುತ್ತದೆ, ಗಲಭೆ ಎಬ್ಬಿಸುತ್ತಲೆ ಇರುತ್ತದೆ. ಇದನ್ನ ಹಿಡಿದಿಟ್ಟುಕೊಳ್ಳುವುದು ಒಂದೇ, ಗಾಳಿಯನ್ನ ಹಿಡಿದಿಟ್ಟುಕೊಳ್ಳುವುದು ಒಂದೇ. ಈ ಚಂಚಲ ಮನಸ್ಸನ್ನ ನಿಯಂತ್ರಣ ಮಾಡುವುದು ಹೇಗೆ ಹೇಳು? ಎಂದು.

ಆಗ ಅರ್ಜುನನ ಪ್ರಶ್ನೇಗೆ ಉತ್ತರಿಸಿದ ಕೃಷ್ಣ, ನೀನು ಹೇಳುವುದು ನಿಜ ಅರ್ಜುನ, ಈ ಮನಸ್ಸು ಚಂಚಲಾವಾಗಿದೆ, ಮನಸ್ಸಿನ ಸ್ವಭಾವವೇ ಅಂತದ್ದು, ಆದರೆ ಸತತವಾದ ಅಭ್ಯಾಸಬಲದಿಂದ, ಧ್ಯಾನದಿಂದ  ಈ ಚಂಚಲ ಮನಸ್ಸನ್ನ ನಿಯಂತ್ರಿಸಬಹುದು ಎಂದು. 

ನೋಡಿ ಅರ್ಜುನನ ಪ್ರಶ್ನೇ ಎಷ್ಟು ಸೂಕ್ಮವಾಗಿದೇಯೊ ಅಷ್ಟೇ ಸಮಂಜಸವಾಗಿದೆ ಶ್ರೀಕೃಷ್ಣನ ಉತ್ತರ. ಇಲ್ಲಿ ಶ್ರೀಕೃಷ್ಣ ಅಭ್ಯಾಸದ ಹಾಗೂ ಧ್ಯಾನದ ಮಹತ್ವವನ್ನ ತಿಳಿಸಿದ್ದಾರೆ, ಸತತವಾದ ಅಭ್ಯಾಸವಿದ್ದರೆ ಎಂತಹ ಚಂಚಲ ಮನಸ್ಸನ್ನು ಕೂಡ ನಿಯಂತ್ರಿಸಬಹುದು ಎಂದು.