ಬೆಂಗಳೂರು: ತಿಂಗಳು ಹಣ ಹಾಕುವುದಕ್ಕೆ ಗ್ಯಾರಂಟಿ ಏನು ಸಂಬಳನಾ? ಎಂಬ ಕಾಂಗ್ರೆಸ್ ಸಚಿವರ ಉಡಾಫೆಯ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಚಿವ ಕೆಜೆ ಜಾರ್ಜ್ ಅವರು ನೀಡಿರುವ ಈ ರೀತಿಯ ಹೇಳಿಕೆಯೊಂದು ಜನಾಕ್ರೋಶವನ್ನ ಸೃಷ್ಟಿಸಿದೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹಾರಿಕೆ ಉತ್ತರ ನೀಡಿ ನೀಡಿದ್ದಾರೆ. ಆದರೆ, ಯಾವುದೇ ಗ್ಯಾರಂಟಿ ನಿಲ್ಲಿಸಲ್ಲ, ಸದ್ಯದಲ್ಲೇ ಹಣ ಹಾಕುತ್ತೇವೆ ಎಂದು ಎಂದು ಸಿಎಂ ಸಿದ್ದರಾಮಯ್ಯ ಭರವಸೆಯನ್ನ ನೀಡಿದ್ದಾರೆ. ಇನ್ನೂ ತಿಂಗಳು ತಿಂಗಳು ಸರಿಯಾಗಿ ಗ್ಯಾರಂಟಿ ಯೋಜನೆಯ ನಹಣ ಸಿಗದೇ ಕಂಗೆಟ್ಟಿರುವ ಮಂದಿ ಸಚಿವರ ಬೇಜವಾಬ್ದಾರಿ ಉತ್ತರಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.