ಮೈಸೂರು : ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶಗೊಂಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಆರ್.ಅಶೋಕ್, ನಮಗೆ ವೋಟು ಹಾಕಿ ನೀವು ಏನು ಬೇಕಾದ್ರೂ ಮಾಡಿ.ಇದು ಕಾಂಗ್ರೆಸ್ ಸರ್ಕಾರದ ಸ್ಲೋಗನ್ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮುಸ್ಲಿಂರ ಮತಕ್ಕಾಗಿ ಕಾಂಗ್ರೆಸ್ ಯಾವ ಹಂತಕ್ಕೆ ಬೇಕಾದ್ರೂ ಇಳಿಯುತ್ತದೆ. ಮುಸ್ಲಿಂರ ಓಲೈಕೆಯಷ್ಟೇ ಕಾಂಗ್ರೆಸ್ ಉದ್ದೇಶ. ಕಾಂಗ್ರೆಸ್ ಸರ್ಕಾರ ಯಾವಾಗಲೇ ಬರಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತೆ. ಈ ಸರ್ಕಾರವನ್ನ ಕಿತ್ತೋಗೆಯುವುದೇ ನಮ್ಮ ಉದ್ದೇಶ. ನಮ್ಮ ಹೋರಾಟ ಹತ್ತಿಕ್ಕಲು ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಆರ್. ಅಶೋಕ್ ತಿಳಿಸಿದರು.