ಇದೇ ವರ್ಷ ನವೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನುವ ಆರ್. ಅಶೋಕ್ ಹೇಳಿಕೆಗೆ ಸಚಿವ ಜಿ. ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.. ವಿಪಕ್ಷ ನಾಯಕ ಆರ್. ಅಶೋಕ್ ಯಾವಾಗಿನಿಂದ ಭವಿಷ್ಯ ಹೇಳಿಕೆ ಕಲಿತ್ರು ಗೊತ್ತಿಲ್ಲ ಅಂತಾ ವ್ಯಂಗ್ಯ ಮಾಡಿದ್ದಾರೆ.. ಸಿಎಂ ಬದಲಾವಣೆ ರೀತಿ ಕಾಂಗ್ರೆಸ್‌ನಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.. 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ, ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಅಂತಾ ಆಯ್ಕೆ ಮಾಡಲಾಗಿದೆ.. ದೆಹಲಿಯ ಹೈಕಮಾಂಡ್ ನಾಯಕರೂ ಸಿದ್ದರಾಮಯ್ಯರನ್ನೇ ನೇಮಿಸಿದ್ದಾರೆ.. ಹೀಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಅಂತಾ ಜಿ. ಪರಮೇಶ್ವರ್ ಹೇಳಿದ್ದಾರೆ..